ಬೆಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ನಿನ್ನೆ ಶುಕ್ರವಾರ ರಾತ್ರಿಯೇ ಮಂಗಳೂರು ಅಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಲಾಗಿದೆ. ಸುಟ್ಟ ಗಾಯಗಳಿಂದ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಂಕಿತ ಉಗ್ರನನ್ನು ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ಸೆಂಟರ್ ನಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಬೆಂಗಳೂರಿನ ಎನ್ ಐಎ ಕಚೇರಿಯಲ್ಲಿ ಶಾರೀಕ್ ನ ವಿಚಾರಣೆ ಮುಂದುವರಿಯಲಿದೆ.
ಶಾರೀಕ್ ಬಾಂಬ್ ಸ್ಪೋಟಕ ಸಾಮಾಗ್ರಿಗಳನ್ನು ಆನ್ ಲೈನ್ ನಲ್ಲಿ ಖರೀದಿಸಿದ್ದ. ಆದ್ರೆ ತನ್ನ ಮನೆಗಾಗಲಿ ಮೈಸೂರಿನ ಯಾವ ವಿಳಾಸಕ್ಕಾಗಲಿ ಅದು ಬಂದಿರಲಿಲ್ಲ. ಆದನ್ನ ಖರೀದಿ ಮಾಡೊದಕ್ಕಾಗಿಯೇ ಕೊಚ್ಚಿಗೆ ಹೋಗಿದ್ದ. ಅಲ್ಲಿ ಮತ್ತೊಂದು ಹೆಸರಿನ ದಾಖಲೆಯನ್ನು ಕೊಟ್ಟು ಅಲ್ಲಿನ ಲಾಡ್ಜ್ ನಲ್ಲಿ ರೂಂ ಮಾಡಿದ್ದ. ಲಾಡ್ಜ್ ವಿಳಾಸಕ್ಕೆ ಬುಕ್ ಮಾಡಿದ್ದ ಸ್ಪೋಟಕ ಸಮಾಗ್ರಿಗಳು ಬಂದಿತ್ತು.
ಇನ್ನು ಮೊಹಮ್ಮದ್ ಶಾರೀಕ್ ಗೆ ಕಂಪ್ಲೀಟ್ ಆಗಿ ಹಣದ ಫಂಡಿಂಗ್ ಮಾಡ್ತಾ ಇದ್ದಿದ್ದು ಅಬ್ದುಲ್ ಮತೀನ್ ಅಹ್ಮದ್ ತಾಹ. ಹೌದು ಈತನಿಗೆ ಐಸಿಸ್ ನ ನೇರ ಸಂಪರ್ಕವಾಗಿದೆ. ಅಲ್ಲಿಂದ ಆತನ ಸೂಚನೆ ಮೇರೆಗೆ ಶಾರೀಕ್, ಮಾಝ್ ಸೇರಿದಂತೆ ವಿವಿಧ ಯುವಕರು ಭಯೋತ್ಪಾದಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದರು. ಬ್ಲಾಕ್ ವೆಬ್ ಗಳ ಮೂಲಕ ಹಾಗೂ ಬಿಟ್ ಕಾಯಿನ್ ಮೂಲಕ ಇವರಿಗೆ ಫಂಡಿಗ್ ಆಗ್ತಾ ಇತ್ತು ಅನ್ನೊದು ತನಿಖೆಯಲ್ಲಿ ಬಯಲಾಗಿದೆ. ಮಹಮ್ಮದ್ ಶಾರೀಕ್ ಗುಣಮುಖನಾಗಿದ್ದಾನೆ. ಓಡಾಡುವ ಸ್ಥಿತಿ ತಲುಪಿದ್ದಾನೆ. ಆದ್ದರಿಂದ ಎನ್ ಐಎ ಹೆಚ್ಚಿನ ವಿಚಾರಣೆ ನಡೆಸಿದೆ.










