ಮಂಗಳೂರು : ಬೆಂದೂರಿನ ಚರ್ಚ್ ಕಚೇರಿಗೆ ನುಗ್ಗಿದ ಅಪರಿಚಿತ ವ್ಯಕ್ತಿಯೋರ್ವ ಲಕ್ಷಾಂತರ ಹಣವನ್ನು ದೋಚಿ ಪರಾರಿಯಾಗಿದ್ದಾನೆ.
ನಿನ್ನೆ ಬೆಳಗ್ಗೆ ಚರ್ಚಿನ ಧರ್ಮಗುರುಗಳು ಪೂಜೆಗೆ ಹೋಗುವ ಅವಸರದಲ್ಲಿ ತಮ್ಮ ಕಚೇರಿಗೆ ಬೀಗ ಹಾಕುವುದನ್ನು ಮರೆತಿದ್ದು ಈ ಸಂದರ್ಭವನ್ನು ಉಪಯೋಗಿಸಿಕೊಂಡ ಅಪರಿಚಿತ ವ್ಯಕ್ತಿ ಧರ್ಮಗುರುಗಳ ಕಚೇರಿಯಲ್ಲಿದ್ದ ರೂ 4.98 ಲಕ್ಷ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ. ನಿನ್ನೆ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.










