ಮಂಡ್ಯದಲ್ಲಿ ಕೋವಿಡ್ ಆತಂಕ – ತಮಿಳುನಾಡಿಗೆ ಹೋಗಿ ಬಂದಿದ್ದ 30ಕ್ಕೂ ಹೆಚ್ಚು ಮಂದಿಗೆ ಸೋಂಕು…

63
firstsuddi

ಮಂಡ್ಯ : ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಆತಂಕ ಮನೆ ಮಾಡಿದೆ. ತಮಿಳುನಾಡಿಗೆ ಹೋಗಿ ಬಂದಿದ್ದ 30ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ತಮಿಳುನಾಡಿನ ಓಂಶಕ್ತಿ ದೇವಸ್ಥಾನಕ್ಕೆ ಹೋಗಿದ್ದ ಮಂಡ್ಯದ ಶ್ರೀರಂಗಪಟ್ಟಣದ ಶೆಟ್ಟಿಹಳ್ಳಿ ಗ್ರಾಮದ ಭಕ್ತರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕಳೆದ ವಾರ 6 ಬಸ್ ಗಳಲ್ಲಿ ದೇವಾಲಯಕ್ಕೆ ತೆರಳಿದ್ದರು. ಈವರೆಗೆ ವಾಪಾಸ್ಸಾದ 4 ಬಸ್ ನಲ್ಲಿದ್ದ ಭಕ್ತರಲ್ಲಿ 30ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಇಂದು ಅಥವಾ ನಾಳೆ ಮತ್ತೆರಡು ಬಸ್ ಶ್ರೀರಂಗಪಟ್ಟಣಕ್ಕೆ ವಾಪಾಸ್ಸಾಗುವ ಸಾಧ್ಯತೆ ಇದೆ.

ಪಾಸಿಟಿವ್ ಬಂದವರು ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ. ಆರೋಗ್ಯ ಸಿಬ್ಬಂದಿ ತಮಿಳುನಾಡಿನಿಂದ ವಾಪಸ್ಸಾದವರ ಟೆಸ್ಟ್ ಮಾಡುತ್ತಿದ್ದು, ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೂ ಪರೀಕ್ಷೆ ನಡೆಸಲಾಗುತ್ತಿದೆ.