ಮಂತ್ರ ಮಾಂಗಲ್ಯ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟ ಪೂಜಾ ಗಾಂಧಿ ದಂಪತಿ ‘ಕವಿಶೈಲ’ಕ್ಕೆ ಭೇಟಿ…

64
firstsuddi

ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟ ಪೂಜಾ ಗಾಂಧಿ ದಂಪತಿ ಕವಿಶೈಲಕ್ಕೆ ಭೇಟಿ ನೀಡಿದ್ದಾರೆ.

ಸ್ಯಾಂಡಲ್‍ವುಡ್ ನಟಿ ಪೂಜಾ ಗಾಂಧಿ ನ. 29ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕುವೆಂಪು ಅವರ ಮಂತ್ರ ಮಾಂಗಲ್ಯದಂತೆ ವಿವಾಹ ನೆರವೇರಿತ್ತು. ಉದ್ಯಮಿ ವಿಜಯ್ ಘೋರ್ಪಡೆ ಅವರು ಮಂತ್ರ ಮಾಂಗಲ್ಯ ಮೂಲಕ ಪೂಜಾ ಕೈ ಹಿಡಿದಿದ್ದು, ವಿಜಯ್ ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಮಾಲೀಕರಾಗಿದ್ದಾರೆ. ಬೆಂಗಳೂರಿನ ಯಲಹಂಕ ಬಳಿ ಇರುವ ಖಾಸಗಿ ರೆಸಾರ್ಟ್ ಒಂದರಲ್ಲಿ ಬಹಳ ಸರಳವಾಗಿ ಇವರಿಬ್ಬರ ವಿವಾಹ ಸಮಾರಂಭ ಜೋಡಿಯ ಆಸೆಯಂತೆ ನಡೆದಿತ್ತು.

ಪೂಜಾ- ವಿಜಯ್ ಮದುವೆಗೆ ಕುಟುಂಬಸ್ಥರು, ಆಪ್ತರು ಹಾಗೂ ಸ್ಯಾಂಡಲ್‍ವುಡ್ನ ಆತ್ಮೀಯ ಸ್ನೇಹಿತರು ಸೇರಿದಂತೆ ಅನೇಕರು ಭಾಗಿಯಾಗಿದ್ದರು.