ಮಗಳ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದನ್ನು ವಿರೋಧಿಸಿದ್ದಕ್ಕೆ ಬಿಎಸ್ಎಫ್ ಯೋಧನ ಹತ್ಯೆ…

85
firstsuddi

ಗಾಂಧಿನಗರ : ಗುಜರಾತ್ ನ ನಾಡಿಯಾಡ್ ನಲ್ಲಿ ತನ್ನ ಮಗಳ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದನ್ನು ವಿರೋಧಿಸಿದ ಬಿಎಸ್ಎಫ್ ಯೋಧನನ್ನು ಹತ್ಯೆ ಮಾಡಲಾಗಿದೆ.

ಚಕ್ಲಾಸಿ ಗ್ರಾಮದಲ್ಲಿ 15 ವರ್ಷದ ಹುಡುಗ ಬಾಲಕಿಯ ಅಶ್ಲೀಲ ವೀಡಿಯೋವನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ದ. ಇದಕ್ಕೆ ಬಾಲಕಿಯ ತಂದೆ ಯೋಧ ಮೆಲ್ಜಿಭಾಯಿ ವಘೇಲಾ ಶನಿವಾರ ರಾತ್ರಿ ತನ್ನ ಪತ್ನಿ, ಇಬ್ಬರು ಪುತ್ರರು ಹಾಗೂ ಸೋದರಳಿಯನೊಂದಿಗೆ ಯುವಕನ ಮನೆಗೆ ತೆರಳಿದ್ದರು. ಆದರೆ ಹುಡುಗನ ಕುಟುಂಬದವರು ಅವರನ್ನು ನಿಂದಿಸಲು ಪ್ರಾರಂಭಿಸಿದ್ದಾರೆ. ಇದನ್ನು ವಿರೋಧಿಸಿದಾಗ ಹುಡುಗನ ಮನೆಯವರು ಯೋಧನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಮೃತ ಯೋಧ ಬಿಎಸ್ಎಫ್ 56ನೇ ಬೆಟಾಲಿಯನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೆಹ್ಸಾನಾದಲ್ಲಿ ಕಳೆದ 28 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇವರ ಮೃತದೇಹಕ್ಕೆ ಬಿಎಸ್ಎಫ್ ಅಧಿಕಾರಿಗಳು, ನೌಕರರು ಮತ್ತು ಗ್ರಾಮಸ್ಥರ ಸಮ್ಮಖದಲ್ಲಿ ಗೌರವಯುತ ಅಂತಿಮ ನಮನ ಸಲ್ಲಿಸಲಾಯಿತು.

ಮತ್ತೊಂದೆಡೆ ಮೃತ ಬಿಎಸ್ಎಫ್ ಯೋಧನ ಪತ್ನಿ ಘಟನೆಯ ಕುರಿತು ಚಕ್ಲಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಇದೀಗ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.