ಮದುವೆ ಆಗಲು ನಿರಾಕರಿಸಿದ್ದಕ್ಕೆ ಬಾಕ್ಸಿಂಗ್ ಆಟಗಾರ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಕೋಚ್…

270
firstsuddi

ಚಂಡೀಘಡ : ಮದುವೆ ಆಗಲು ನಿರಾಕರಿಸಿದಕ್ಕೆ ಕೋಚ್ ಬಾಕ್ಸಿಂಗ್ ಆಟಗಾರ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಪಟೌದಿಯಲ್ಲಿ ನಡೆದಿದೆ. ಸರಿತಾ(25) ಮೃತ ಯುವತಿ ಎಂದು ಗುರುತಿಸಲಾಗಿದ್ದು, ಟೇಕ್ವಾಂಡೋ ಆಟಗಾರ್ತಿಯಾಗಿದ್ದ ಸರಿತಾ ಅವರು ಸೋಮ್‍ಬೀರ್ ಎಂಬುವವರೊಂದಿಗೆ ಬಾಕ್ಸಿಂಗ್ ಕಲಿಯುತ್ತಿದ್ದರು. ಈ ನಡುವೆ ಸೋಮ್‍ಬೀರ್ ಅವರು ಸರಿತಾ ಅವರನ್ನು ಪ್ರೀತಿಸಲು ಶುರು ಮಾಡಿದ್ದು, ಬಳಿಕ ಯುವತಿಯೊಂದಿಗೆ ವಿವಾಹವಾಗುವಂತೆ ಕೇಳಿಕೊಂಡಿದ್ದಾರೆ. ಆದರೆ ಸೋಮ್‍ಬೀರ್ ಅವರ ಈ ಮಾತನ್ನು ಸರಿತಾ ಅವರು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ತರಬೇತುದಾರ ಸೋಮ್‍ಬೀರ್ ಯುವತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬಿಲಾಸ್‍ಪುರ್ ಪೊಲೀಸರು ಆರೋಪಿಗಾಗಿ ಬಲೆಬೀಸಿದ್ದಾರೆ.