ಚಿಕಾಗೋ : ಮನುಷ್ಯನಿಗೆ ಹಂದಿಯ ಹೃದಯವನ್ನು ಕಸಿ ಮಾಡಲಾಗಿದ್ದು, ಇದೀಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಈ ಮೂಲಕ ವೈದ್ಯಕೀಯ ವಿಜ್ಞಾನದಲ್ಲಿ ನೂತನ ಸಾಧನೆ ಮಾಡಲಾಗಿದೆ.

57 ವರ್ಷ ವಯಸ್ಸಿನ ಡೇವಿಡ್ ಬೆನೆಟ್ ತೀವ್ರವಾದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಶುಕ್ರವಾರ ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿ ಹಂದಿ ಹೃದಯವನ್ನು ಯಶಸ್ವಿಯಾಗಿ ಜೋಡನೆ ಮಾಡಲಾಗಿದೆ.
ಚಿಕಿತ್ಸೆಯಾದ ಮೂರು ದಿನಗಳ ನಂತರ ರೋಗಿಯು ಚೇತರಿಸಿಕೊಂಡಿದ್ದಾರೆ. ಅವರಿಗೆ ಅಳವಡಿಸಲಾದ ಹೃದಯ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಡೇವಿಡ್ ಬೆನೆಟ್ ಅವರು, ಸಾಯುವುದು ಅಥವಾ ಈ ಕಸಿ ಮಾಡಿಸಿಕೊಳ್ಳುವುದು ನನ್ನ ಕೊನೆಯ ಆಯ್ಕೆಯಾಗಿತ್ತು. ಆದರೆ ನಾನು ಬದುಕಲು ಬಯಸುತ್ತೇನೆ. ಬದುಕಲು ನನಗೆ ಇದು ಒಂದೇ ಆಯ್ಕೆಯಾಗಿತ್ತು ಎಂದು ವಿವರಿಸಿದರು.
ಪ್ರಾಣಿಗಳ ಅಂಗಾಂಗಗಳನ್ನ ಬಳಸಿಕೊಂಡು ಮಾನವನ ಪ್ರಾಣ ಉಳಿಸಬಹುದು ಎಂಬುದನ್ನು ಈ ಅನ್ವೇಷಣೆ ಹಾಗೂ ಶಸ್ತ್ರಚಿಕಿತ್ಸೆ ತೋರಿಸಿಕೊಟ್ಟಿದೆ.










