ಮನೆಯ ಸೋಫಾ ಕುರ್ಚಿಯ ಬಳಿ ಕಾಣಿಸಿಕೊಂಡ ನಾಗರ  ಹಾವಿನ ಮರಿ.

34

ಶಿವಮೊಗ್ಗ :  ನಾಗರ ಹಾವಿನ ಮರಿ ಒಂದು ಮನೆ ಒಳಗೆ ಬಂದು   ಸೋಫಾ ಕೆಳಭಾಗದಲ್ಲಿ  ಕುಳಿತು ಬುಸುಗುಟ್ಟುತ್ತಿದ್ದ  ಘಟನೆ  ಸಿದ್ದೇಶ್ವರ ನಗರದಲ್ಲಿ ನಡೆದಿದೆ.

 ರವಿಕಿರಣ್ ಎಂಬುವರ ಮನೆಯಲ್ಲಿ  ಮನೆ ಕಸ ತೆಗೆಯುತ್ತಿದ್ದ ವೇಳೆ  ಸೋಫಾ ಕುರ್ಚಿಯ ಕೆಳಗಡೆ  ಒಂದು ಅಡಿ ಉದ್ದದ  ನಗರ ಹಾವಿನ ಮರಿ ಕಂಡ ಮನೆಮಾಲೀಕ  ಉರಗ ಸಂರಕ್ಷಕ  ಕಿರಣ್ ಅವರಿಗೆ ತಿಳಿಸಿದ್ದು  ಸ್ಥಳಕ್ಕೆ ಬಂದು  ಹಾವನ್ನು  ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹಾವಿನ ಮರಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.