ಮಳೆಹಾನಿ ವೀಕ್ಷಿಸಲು ಬಂದ ನಾರಾಯಣ ಗೌಡರನ್ನು ತರಾಟೆಗೆ ತೆಗೆದುಕೊಂಡ ಕೈ ಪಾಲಿಕೆ ಸದಸ್ಯರು.

54
firstsuddi

ಶಿವಮೊಗ್ಗ : ಮಳೆ ಹಾನಿ ವೀಕ್ಷಿಸಲು ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡರನ್ನು ಕಾಂಗ್ರೆಸ್ ಪಾಲಿಕೆ ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಕಳೆದ 4 ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಜಿಲ್ಲೆ ತತ್ತರಿಸಿ ಹೋಗಿತ್ತು. ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿತ್ತು. ಇದರಿಂದ ಬೇಸತ್ತ ಜನರು, ಹಿಡಿ ಶಾಪ ಹಾಕಿದ್ದರು. ಇದೀಗ ಮಳೆ ಮುಗಿದು ನಾಲ್ಕು ದಿನಗಳು ಕಳೆದ ಮೇಲೆ ಬಂದ ಸಚಿವರಿಗೆ ಇಂದು ಪಾಲಿಕೆಯ ವಿಪಕ್ಷದವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಳೆ ಹಾನಿ ವೀಕ್ಷಿಸಲು ಬಂದ ಸಚಿವರು ನೈಜ ಸಮಸ್ಯೆ ಅರಿಯದೆ ಕಾಟಾಚಾರಕ್ಕೆ ವೀಕ್ಷಿಸಲು ಬಂದಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಹಾಗೂ ಮೇಯರ್ ಬೀದಿ ಕಾಳಗಕ್ಕೆ ಇಳಿದಿದ್ದರಿಂದ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.