ಮಹಾಕುಂಭ ಮೇಳ: ಹೊತ್ತಿ ಉರಿದ ಬಸ್, ಒಬ್ಬ ಸಾವು.

31

ಮಥುರಾ: ತೆಲಂಗಾಣದ ಜನರಿಂದ ತುಂಬಿದ್ದ ಬಸ್‍ವೊಂದು ಮಥುರಾದಲ್ಲಿ ಹೊತ್ತಿ ಉರಿದಿದೆ. ಮಾಹಿತಿ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ತೆಲಂಗಾಣದ 50 ಜನರಿದ್ದ ಖಾಸಗಿ ಬಸ್‍ವೊಂದು ಉತ್ತರಪ್ರದೇಶದ ಪ್ರಯಾಗರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಆಗಮಿಸಿದ್ದರು. ಮಂಗಳವಾರ ಪ್ರಯಾಗರಾಜ್‍ನಲ್ಲಿ ಮಹಾಕುಂಭ ಸ್ನಾನ ಮಾಡಿದ ಬಳಿಕ ತೆಲಂಗಾಣದ 50 ಪ್ರಯಾಣಿಕರ ಗುಂಪು ಖಾಸಗಿ ಬಸ್ ಹತ್ತಿ ಹೆದ್ದಾರಿಯಲ್ಲಿರುವ ಪ್ರವಾಸಿ ಸೌಲಭ್ಯ ಕೇಂದ್ರಕ್ಕೆ ತೆರಳುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಲೇ ಬೆಂಕಿ ಆವರಿಸಿ, ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆ ಬಸ್‍ನಲ್ಲಿದ್ದ ಪ್ರಯಾಣಿಕರು ಕಿಟಕಿ ಗಾಜುಗಳನ್ನು ಒಡೆದು ಹೊರಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಆದ್ರೆ ಬಸ್ಸಿನಲ್ಲಿದ್ದ ವೃದ್ಧ ಪ್ರಯಾಣಿಕರೊಬ್ಬರು ಹೊರಬರಲು ಸಾಧ್ಯವಾಗದೇ ಒಳಗಡೆ ಸಿಲುಕಿಕೊಂಡು ಮೃತಪ್ಪಟ್ಟಿದ್ದಾರೆ. ಬೆಂಕಿ ಅವಘಡದ ಕುರಿತು ವರದಿ ಪಡೆದ ಬಳಿಕ ಪೊಲೀಸರು ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಆದರೆ ಅಷ್ಟೊತ್ತಿಗಾಗಲೇ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಬಸ್‍ನಲ್ಲಿ ಮೃತ ಪ್ರಯಾಣಿಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.