ಮಹಾಮಾರಿ ಕೊರೊನಾ ವೈರಸ್‍ಗೆ ವಿಶ್ವದಾಧ್ಯಂತ 1.5 ಲಕ್ಷಕ್ಕೂ ಅಧಿಕ ಮಂದಿ ಬಲಿ…

149
firstsuddi

ಪ್ಯಾರೀಸ್ : ಚೀನಾದಿಂದ ಆರಂಭವಾಗಿ ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್‍ಗೆ ವಿಶ್ವದಾದ್ಯಂತ 1.5 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ನಿನ್ನೆ ರಾತ್ರಿ 7ಗಂಟೆಯ ವೇಳೆಗೆ ವಿಶ್ವದಾಧ್ಯಂತ ಮಹಾಮಾರಿ ಕೊರೊನಾ ವೈರಸ್‍ಗೆ 1.5 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಯೂರೋಪ್-96,721, ಅಮೆರಿಕಾ-34,575, ಇಟಲಿ-22,745, ಸ್ಪೇನ್-19,478, ಫ್ರಾನ್ಸ್-18,681 ಹಾಗೂ ಭಾರತ-480 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೇ ವಿಶ್ವದ 193 ದೇಶಗಳಲ್ಲಿ ಒಟ್ಟು 22,07,730 ಮಂದಿ ಸೋಂಕಿನಿಂದ ಬಳಲುತ್ತಿದ್ದು, ಈವರೆಗೆ 4.83 ಲಕ್ಷ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾಹಿತಿ ತಿಳಿದು ಬಂದಿದೆ.