ಮಹಿಳಾ ಇನ್ಸ್ ಪೆಕ್ಟರ್ ರಕ್ಷಿಸಿದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು…

80
firstsuddi

ಚೆನ್ನೈ : ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ರಕ್ಷಿಸಿದ ಯುವಕ ಒಂದು ದಿನದ ನಂತರದಲ್ಲಿ ಸಾವನ್ನಪಿದ್ದಾನೆ. ಉದಯ ಕುಮಾರ್(25) ಮೃತ ಯುವಕ. ಈತ ಇಂದು ಬೆಳಗ್ಗೆ ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪಿದ್ದಾನೆ.

ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ನಿನ್ನೆ ಯುವಕನೊಬ್ಬ ಪ್ರಜ್ಞಾಹೀನನಾಗಿ ಬಿದ್ದಿದ್ದನು. ಇದನ್ನು ಗಮನಿಸಿದ ಟಿ.ಪಿ.ಛಾತಿರಾಮ್ ನ ಇನ್ಸ್ ಪೆಕ್ಟರ್ ರಾಜೇಶ್ವರಿ ಅವರು ಪ್ರಜ್ಞಾಹೀನ ವ್ಯಕ್ತಿಯನ್ನು ತನ್ನ ಹೆಗಲ ಮೇಲೆ ಹೊತ್ತು ಕೊಂಡು ಹೋಗಿ ಆಟೋದಲ್ಲಿ ಇಬ್ಬರನ್ನು ಕೂರಿಸಿ ಈ ವ್ಯಕ್ತಿಯನ್ನು ಬದುಕಿಸಿ, ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಹೋದ್ಯೋಗಿಗಳಿಗೆ ಕೂಗಿ ಹೇಳುತ್ತಿರುವ ವೀಡಿಯೋ ವೈರಲ್ ಆಗಿದ್ದು, ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತೊಯ್ದ ಪೊಲೀಸ್ ಅಧಿಕಾರಿಯನ್ನು ಜನರು ಶ್ಲಾಘಿಸಿದ್ದಾರೆ.