ಮಾಜಿ ಎಂಎಲ್‍ಸಿ ಕೈಲಾಶ್ ಸಿಂಗ್ ಸೇರಿ ನಾಲ್ವರು ಸದಸ್ಯರನ್ನು ಉಚ್ಚಾಟನೆ ಮಾಡಿದ ಅಖಿಲೇಶ್ ಯಾದವ್.

50
firstsuddi

ಲಖನೌ: ಸಮಾಜವಾದಿ ಪಕ್ಷದ ಮಾಜಿ ಎಂಎಲ್‍ಸಿ ಕೈಲಾಶ್ ಸಿಂಗ್ ಸೇರಿದಂತೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಾಬಾ ಸಾಹೇಬ್ ವಾಹಿನಿ, ರಮೇಶ್ ಯಾದವ್, ವಿಜಯ್ ಯಾದವ್, ಗಾಜಿಪುರ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ಯಾದವ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ಘಾಜಿಪುರದಲ್ಲಿ ನಡೆದ ಎಂಎಲ್‍ಸಿ ಚುನಾವಣೆ ವೇಳೆ ಇವರೆಲ್ಲ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಇವರನ್ನು ಉಚ್ಚಾಟಿಸಿದ್ದಾರೆ.

ಯಾದವ್ ನಿನ್ನೆ ಪಕ್ಷದ ಮಿತ್ರಪಕ್ಷಗಳಾದ ಅಪ್ನಾ ದಳ (ಕೆ), ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನಾಯಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ, ಉತ್ತರ ಪ್ರದೇಶದ ಶಾಸಕ ಮತ್ತು ಪ್ರಗತಿಶೀಲ ಸಮಾಜವಾದಿ ಪಕ್ಷದ (ಪಿಎಸ್ ಪಿ) ನಾಯಕ ಶಿವಪಾಲ್ ಯಾದವ್ ಸಭೆಗೆ ಹಾಜರಾಗಿರಲಿಲ್ಲ. ಶಿವಪಾಲ್ ಯಾದವ್ ಜೊತೆಗೆ ಅಪ್ನಾ ದಳ (ಕೆ) ನಾಯಕಿ ಪಲ್ಲವಿ ಪಟೇಲ್ ಕೂಡ ಸಭೆಗೆ ಹಾಜರಾಗಿರಲಿಲ್ಲ. ಎಸ್ ಬಿಎಸ್ ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್ ಭರ್ ಮತ್ತು ಆರ್‌ಎಲ್‌ಡಿ ಶಾಸಕಾಂಗ ಪಕ್ಷದ ನಾಯಕ ರಾಜ್ ಪಾಲ್ ಬಲಿಯಾನ್ ಅಖಿಲೇಶ್ ಅವರೊಂದಿಗಿನ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್‌ಎಲ್‌ಡಿ ನಾಯಕ ರಾಜ್ ಪಾಲ್ ಬಲಿಯಾನ್, ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಸಭೆಯಲ್ಲಿ ಪರಾಮರ್ಶೆ ಮಾಡಲಾಯಿತು ಎಂದು ತಿಳಿಸಿದ್ದಾರೆ. ಸಭೆಗೆ ಶಿವಪಾಲ್ ಯಾದವ್ ಗೈರು ಹಾಜರಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ, ನಾವೆಲ್ಲರೂ ಒಟ್ಟಿಗೆ ಇದ್ದೇವೆ ಎಂದರು.