ಮುರುಗೇಶ್ ನಿರಾಣಿ ನನ್ನ ಮುಂದೆ ಬಚ್ಚಾ : ಯತ್ನಾಳ್

58
firstsuddi

ಬೆಳಗಾವಿ : ಮುರುಗೇಶ್ ನಿರಾಣಿ ನನ್ನ ಮುಂದೆ ಬಚ್ಚಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಿಜೆಪಿ ಕಟ್ಟುವಾಗ ನಮ್ಮ ಮನೆಗೆ ಟಿಕೆಟ್ ಬೇಕು ಎಂದು ಬರ್ತಿದ್ದ. ಇವತ್ತು ಹಿಂದೂ ಸ್ವಾಮೀಜಿಗಳ ಬಗ್ಗೆ ಮಾತನಾಡಬಾರದು ಎಂದು ಹೇಳುತ್ತಿರುವ ನಿರಾಣಿ ಈ ಹಿಂದೆ ವಾಟ್ಸಪ್ ಮೆಸೇಜ್ ನಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನ ಮಾತನಾಡಿದ್ದರು. ಇಂತಹವರನ್ನು ಸಿಎಂ ಮಾಡಿದರೆ ವಿಧಾನಸೌಧಕ್ಕೆ ಅವಮಾನಕರ ಎಂದು ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.

ಮುರುಗೇಶ್ ನಿರಾಣಿ ಮಂತ್ರಿ ಹೇಗಾದ ಏನೆಲ್ಲಾ ಪ್ರಲಾಪ ಮಾಡಿದ ಎಲ್ಲಾ ಗೊತ್ತಿದೆ. ಹೆಚ್ಚು ಮಾತಾಡಿದರೆ ಎಲ್ಲಾ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಏಕವಚನದಲ್ಲೇ ಕಿಡಿಕಾರಿದರು.

ಪಂಚಮಸಾಲಿ ಸಮೂದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಲೂ ಸರ್ಕಾರದ ಮೇಲೆ ವಿಶ್ವಾಸ ಇದೆ. ನಾಳೆ ಮೀಸಲಾತಿ ಪ್ರಕಟ ಆಗುತ್ತದೆ, ಯಾವುದೇ ಸಂಶಯ ಇಲ್ಲ ಎಂದ ಅವರು, ಬೊಮ್ಮಾಯಿ ಐತಿಹಾಸಿಕ ನಿರ್ಧಾರ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.