ಮೂಡಿಗೆರೆಯಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ! ಕುಸಿದ ಮನೆ! ಆತಂಕದಲ್ಲಿ ತಾಲ್ಲೂಕಿನ ಜನತೆ!

304
firstsuddi

ಮೂಡಿಗೆರೆ: ತಾಲ್ಲೂಕಿನಾಧ್ಯಂತ ಸುಮಾರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಹಿನ್ನಲೆ, ಜನಜೀವನ ಅಸ್ಥವ್ಯಸ್ಥವಾಗಿದ್ದು, ಅದರಂತೆ ಇಂದು ತಾಲ್ಲೂಕಿನಾಧ್ಯಂತ ಶಾಲಾ ಕಾಲೇಜುಗಳಿಗೆ ತಹಶೀಲ್ದಾರರ ಆದೇಶದಂತೆ ರಜೆಯನ್ನು ಘೋಷಿಸಲಾಗಿದೆ.
ತಾಲ್ಲೂಕಿನಾಧ್ಯಂತ ಧಾರಕಾರವಾಗಿ ಹಾಗೂ ಬಿಡುವಿಲ್ಲದ ನಿರಂತರ ಮಳೆಯು ಇಂದು ಸಹ ಪುನಾರವರ್ತಿಯಾದ ಪರಿಣಾಮ ಇಂದು ಪಟ್ಟಣದ ವಾರ್ಡ್ ಸಂಖ್ಯೆ 6 ರ ಮಾರ್ಕೇಟ್ ರಸ್ತೆಯಲ್ಲಿರುವ ಲೋಕೇಶ್ ಎಂಬುವವರಿಗೆ ಸೇರಿದ ಮನೆಯ ಹಿಂಬದಿಯ ಕೊಠಡಿ ಕುಸಿದಿದ್ದು, ಕೊಠಡಿಯಲ್ಲಿ ಆ ಸಮಯದಲ್ಲಿ ಯಾರು ಇಲ್ಲದ ಪರಿಣಾಮ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.