ಮೂಡಿಗೆರೆ : ಕೊಟ್ಟಿಗೆಹಾರ ಸುತ್ತಮುತ್ತಾ ಧಾರಾಕಾರ ಮಳೆ…

320
firstsuddi

ಮೂಡಿಗೆರೆ ; ಕೊಟ್ಟಿಗೆಹಾರ ಮತ್ತು ಬಣಕಲ ಸುತ್ತಮುತ್ತಾ ಇಂದು ಸಾಧಾರಣ ಮಳೆ ಸುರಿಯಿತು. ಇಂದು ಬೆಳಿಗ್ಗೆಯಿಂದ ಮಳೆ ಬಿಡುವಿಲ್ಲದಂತೆ ಸುರಿದಿದ್ದು ಬಣಕಲ್ ಸುತ್ತಮುತ್ತಾ ವಾರದ ರಜೆಯ ದಿನವಾದ ಇಂದು ಸಾರ್ವಜನಿಕರು ಅಂಗಡಿ ಮುಂಗಟ್ಟುಗಳಲ್ಲಿ ದಿನನಿತ್ಯದ ವಸ್ತುಗಳನ್ನು ಖರೀದಿಸಲು ಬಂದಿದ್ದು ಮಳೆಯಿಂದಾಗಿ ತೊಂದರೆ ಅನುಭವಿಸುವಂತಾಯಿತು.
ಕಾಫಿ ಬೆಳೆಗೆ ಗೊಬ್ಬರ ಹಾಕುವ ಸಮಯವಾದ್ದರಿಂದ ಉತ್ತಮ ಮುಂಗಾರು ಮಳೆಯಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಾಳುಮೆಣಸು ಚಿಗುರಿ ಗರಿ ಬಿಡಲು ಪ್ರಾರಭವಾಗಿದ್ದು ಮಳೆಯಿಂದಾಗಿ ಹುಲುಸಾಗಿ ಬೆಳೆಸಲು ಸಹಾಯವಾಗಲಿದೆ.