ಮೂಡಿಗೆರೆ : ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದುಕೊಂಡ ಪಿಯುಸಿ ವಿಧ್ಯಾರ್ಥಿಗಳು…

3730
firstsuddi

ಮೂಡಿಗೆರೆ : ಕಾಲೇಜಿನಿಂದ ಹಿಂದಿರುಗುವಾಗ ಮಾತಿಗೆ-ಮಾತು ಬೆಳೆದು ಪಿಯುಸಿ ವಿದ್ಯಾರ್ಥಿಗಳು ಚಾಕು ಇರಿದಿರುವ ಘಟನೆ ಮೂಡಿಗೆರೆ ಸಂತೆ ಮೈದಾನದ ಸಮೀಪ ನಡೆದಿದ್ದು, ಕಾಲೇಜು ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ವಿನಯ್, ಗಾಯನ್, ಸಾಗರ್ ಹಾಗೂ ಚೇತನ್ ಎಂಬುವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಮಾತಿಗೆ ಮಾತು ಬೆಳೆದು ಸಾಗರ್ ಚೇತನ್ ಎಂಬ ಯುವಕರು ವಿನಯ್ ಹಾಗೂ ಗಾಯನ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಜಗಳ ಮಾಡಿಕೊಂಡು ಆಸ್ಪತ್ರೆ ಹಾಗೂ ಠಾಣೆ ಮೆಟ್ಟಿಲೇರಿರುವ ಎಲ್ಲರೂ ಪ್ರಥಮ ಹಾಗೂ ದ್ವಿತಿಯ ಪಿಯುಸಿ ಯುವಕರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ಮಾಡಿದ ಸಾಗರ್ ಹಾಗೂ ಚೇತನ್ ಎಂಬ ಯುವಕರನ್ನು ಬಂಧಿಸಿ ಬೈಕಿನಲ್ಲಿದ್ದ ಸೈಕಲ್ ಚೈನ್ ಹಾಗೂ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪಿಯುಸಿ ಓದೋ ಮಕ್ಕಳು ಚಾಕು, ಸೈಕಲ್ ಚೈನ್ನಲ್ಲಿ ಹಲ್ಲೆ ಮಾಡ್ತಿದ್ದಾರಂದ್ರೆ, ಆಧುನಿಕ ಸಮಾಜ ಎತ್ತ ಸಾಗ್ತಿದೆ ಅನ್ನೋದು ಗಲಾಟೆ ನೋಡಿದ ಸ್ಥಳಿಯರಲ್ಲಿ ಆತಂಕ ಮೂಡಿದೆ.