ಮೂಡಿಗೆರೆ : ಅನಾಗತ್ಯವಾಗಿ ಗಡಿಭಾಗದ ಜಿಲ್ಲೆಗೆ ವಾಹನದಲ್ಲಿ ಓಡಾಡುವರಿಗೆ ಬಣಕಲ್ ಪೊಲೀಸರಿಂದ ವಾಹನ ತಪಾಸಣೆ…

223
firstsuddi

ಮೂಡಿಗೆರೆ :  ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಗಡಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಗೆ ವಾಹನಗಳಲ್ಲಿ ಅನಗತ್ಯವಾಗಿ ಓಡಾಡುವರಿಗೆ ಬಣಕಲ್ ಪೊಲೀಸರು ವಾಹನ ತಪಾಸಣೆ ನಡೆಸಿ ಅಗತ್ಯವಾಗಿ ಸಾಗುವವರಿಗೆ ಮಾತ್ರ ಹೊರತುಪಡಿಸಿ ಇತರರಿಗೆ ಅನುಮತಿ ನಿರ್ಬಂಧಿಸಿದ್ದಾರೆ.

ಬಣಕಲ್ ಸಹಾಯಕ ಸಬ್‍ ಇನ್‍ ಸ್ಪೆಕ್ಟರ್ ಕೆ.ಶಶಿ ಮಾತನಾಡಿ, ಜಿಲ್ಲೆಯ ಅನೇಕ ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಲೇ ಇದೆ. ಕೆಲವರು ಕೋವಿಡ್ ನಿಯಮ ಪಾಲಿಸದೇ ಅನಗತ್ಯವಾಗಿ ಗಡಿಭಾಗದ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಾಗುತ್ತಿರುವುದು ಹಾಗೂ ಬರುತ್ತಿರುವುದು ಕಂಡು ಬಂದಿರುವುದರಿಂದ ಕೋವಿಡ್ ನಿಯಂತ್ರಣಕ್ಕಾಗಿ ಜನರು ಸಹಕರಿಸಬೇಕು. ಬಾಡಿಗೆಗಾಗಿ ವಾಹನಗಳನ್ನು ಗಡಿಭಾಗದಿಂದ ಯಾವುದೇ ನಿರ್ಬಂಧವಿಲ್ಲದೇ ಸುಳ್ಳು ನೆಪಗಳನ್ನು ಹೇಳಿ ಸಾಗುತ್ತಿದ್ದಾರೆ. ಅಂತಹವರ ವಾಹನಗಳನ್ನು ನಿರ್ದಾಕ್ಷಿಣ್ಯವಾಗಿ ವಾಪಾಸ್ ಕಳುಹಿಸಲಾಗುವುದು. ವಾರಾಂತ್ಯದ ಕಪ್ರ್ಯೂಗೆ ಪ್ರವಾಸಿ ತಾಣಗಳಿಗೆ ಜನರು ಹೊರಗೆ ತಿರುಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ನಂದೀಶ್, ಜಗದೀಶ್, ಕಿರಣ್, ಮಂಜುನಾಥ್,ಅರಣ್ಯ ಸಿಬ್ಬಂದಿಗಳು ಇದ್ದರು.