ಚಿಕ್ಕಮಗಳೂರು : ರೈತರಿಗೆ ಸಸಿಗಳನ್ನು ವಿತರಿಸುವ ಮೂಲಕ ರಾಹುಲ್‍ಗಾಂಧಿ ಅವರ ಹುಟ್ಟುಹಬ್ಬ ಆಚರಿಸಿದ ಜಿಲ್ಲಾ ಕಿಸಾನ್ ಕಾಂಗ್ರೆಸ್…

194
firstsuddi

ಚಿಕ್ಕಮಗಳೂರು : ತಾಲ್ಲೂಕಿನ ಜೋಳದಾಳಿನಲ್ಲಿ ರೈತರಿಗೆ ಸಸಿಗಳನ್ನು ವಿತರಿಸುವ ಮೂಲಕ ಜಿಲ್ಲಾ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ಪಕ್ಷದ ನಾಯಕ ರಾಹುಲ್‍ಗಾಂಧಿ ಅವರ ಹುಟ್ಟುಹಬ್ಬವನ್ನು ಇಂದು ಆಚರಿಸಿದರು.

ಆಪೆ ವಾಹನದಲ್ಲಿ ಬೆಳಿಗ್ಗೆ ಮಾವು, ಹಲಸು, ಬೇವು, ಸಾಗುವಾನಿ ಸೇರಿದಂತೆ ವಿವಿಧ ಜಾತಿಯ ಸಸಿಗಳೊಂದಿಗೆ ಗ್ರಾಮಕ್ಕೆ ತೆರಳಿದ ಪದಾಧಿಕಾರಿಗಳು ಗ್ರಾ.ಪಂ. ವ್ಯಾಪ್ತಿಯ ನೂರಾರು ರೈತರಿಗೆ ಅವುಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇನಳ್ಳಿ ಪ್ರಕಾಶ್, ರಾಹುಲ್ ಗಾಂಧಿಯವರು ಈ ದೇಶದ ಆಶಾಕಿರಣ. ರಾಷ್ಟ್ರದ ಅಭಿವೃದ್ದಿ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂದರು.

ಹಲವು ತಿಂಗಳಿನಿಂದ ಬೀದಿಯಲ್ಲಿ ಕುಳಿತು ರೈತರು ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರ ಸರ್ಕಾರ ಮನ್ನಣೆ ನೀಡಬೇಕು. ಕೃಷಿಕರ ಬದುಕಿಗೆ ಮಾರಕವಾಗಿರುವ ನೂತನ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು ರೈತರಿಗೇ ಬೇಡವಾದ ಕಾಯ್ದೆ ಸರ್ಕಾರಕ್ಕೆ ಏಕೆ ಬೇಕು. ಕೇಂದ್ರಕ್ಕೆ ಇಂತಹ ಹಠ ಯಾಕೆ ಎಂದು ಪ್ರಶ್ನಿಸಿದರು.

ಆಲ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಮುದಾಬಿರ್ ಮಾತನಾಡಿ ರೈತರ ಭಾವನೆಗಳಿಗೆ ಬೆಲೆಕೊಡದೇ ಅವರ ಬದುಕಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ರೂಪಿಸಿರುವ ಕೇಂದ್ರದ ಬಿಜೆಪಿ ಸರ್ಕಾರವನ್ನು ದೇಶದ ಜನತೆ ಮುಂದಿನ ಚುನಾವಣೆಯಲ್ಲಿ ಮನೆಗೆ ಕಳುಹಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಯುವಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಆದಿತ್ಯಗೌಡ, ಕೆಪಿಸಿಸಿ ಕಿಸಾನ್ ಸೆಲ್ ಕಾರ್ಯದರ್ಶಿ ಸುಲ್ತಾನ್ ಅಹಮದ್, ಕಿಸಾನ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಬಲರಾಮ್, ಮಂಜುನಾಥ್, ಹೋಬಳಿ ಅಧ್ಯಕ್ಷ ನಾಗೇಶ್, ಶೇಖರ್, ನಸ್ರÀತ್ ಅಲಿ, ಗ್ರಾ.ಪಂ. ಸದಸ್ಯರಾದ ಮಂಜು, ವಿದ್ಯಾ ಹಾಜರಿದ್ದರು.