ಮೂಡಿಗೆರೆ : ಕೋವಿಡ್-19 ವರದಿ ನೆಗೆಟಿವ್ ಬಂದಿದ್ದರೂ ಕ್ಷಯರೋಗ ಪರೀಕ್ಷೆ ಮಾಡಿಸಲು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಂದ್ರೇಶ್ ಮನವಿ…

156
firstsuddi

ಮೂಡಿಗೆರೆ : ಕೋವಿಡ್-19 ವರದಿ ನೆಗೆಟಿವ್ ಬಂದಿದ್ದರೂ ಕ್ಷಯರೋಗ ಪರೀಕ್ಷೆ ಮಾಡಿಸುವಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಂದ್ರೇಶ್ ಮನವಿ ಮಾಡಿಕೊಂಡಿದ್ದಾರೆ. ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಇವರು ಕೋವಿಡ್-19 ಹಾಗೂ ಕ್ಷಯರೋಗದ ಲಕ್ಷಣಗಳು ಸಾಮಾನ್ಯವಾಗಿ ಸಮ್ಯತೆ ಹೊಂದಿರುವುದರಿಂದ ಕೋವಿಡ್ ಪರೀಕ್ಷೆ ಮಾಡಿಸಿ ವರದಿ ನೆಗೆಟಿವ್ ಬಂದಂತವರಿಗೆ ಒಂದು ವಾರಕ್ಕಿಂತ ಹೆಚ್ಚು ದಿನ ಕೆಮ್ಮು ಕಡಿಮೆಯಾಗದಿದ್ದರೆ ತೂಕದಲ್ಲಿ ಇಳಿಕೆ, ಹಸಿವಾಗದಿರುವುದು, ಸಂಜೆ ಆಗುತ್ತಿದ್ದಂತೆ ಜ್ವರ ಕಾಣಿಸಿಕೊಳ್ಳುವುದು, ರಾತ್ರಿ ವೇಳೆ ಬೆವರುವುದು, ಹಾಗೂ ಕೆಲವೊಮ್ಮೆ ಕಫದಲ್ಲಿ ರಕ್ತದ ಹನಿಗಳು ಕಾಣಿಸಿಕೊಂಡರೆ ತಕ್ಷಣ ಆಶಾ ಕಾರ್ಯಕರ್ತೆ ಅಥವಾ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ಕಫ ಪರೀಕ್ಷಿಸಿಕೊಳ್ಳಬೇಕು. ಕೋವಿಡ್-19 ಹಳ್ಳಿಗಳನ್ನು ಗುರುತಿಸಿ ಸಕ್ರೀಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಾ ಕಾರ್ಯಕ್ರಮ ನಡೆಸಲು ತಾಲ್ಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಸಂಗ್ರಹಿಸಿದ ಎಲ್ಲಾ ಕಫದ ಮಾದರಿಗಳನ್ನು ಎಂ.ಜಿ.ಎಂ ಆಸ್ಪತ್ರೆಯಲ್ಲಿ ಉಚಿತ ಪರೀಕ್ಷೆ ಮಾಡಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೂಡಿಗೆರೆ ತಾಲ್ಲೂಕು ಕ್ಷಯರೋಗ ಘಟಕವನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಕ್ಷಯರೋಗ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಪ್ರದೀಪ್, ಹಾಗೂ ಜಯನಾಯಕ್ ಇದ್ದರು.