ಮೂಡಿಗೆರೆ : ಚಾರ್ಮಾಡಿ ಘಾಟ್ ರಸ್ತೆಯ ಆಲೇಖಾನ್ ಹೊರಟ್ಟಿ ಗೇಟ್ ಬಳಿ ಗುಡ್ಡ ಕುಸಿತ…

245
firstsuddi

ಮೂಡಿಗೆರೆ : ತಾಲ್ಲೂಕಿನಾಧ್ಯಂತ ಎಡಬಿಡದೆ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಚಾರ್ಮಾಡಿ ಘಾಟ್ ರಸ್ತೆಯ ಆಲೇಖಾನ್ ಹೊರಟ್ಟಿ ಗೇಟ್ ಬಳಿ ಗುಡ್ಡ ಕುಸಿತವಾಗಿದ್ದು, ಚಾರ್ಮಾಡಿ ಘಾಟ್ ರಸ್ತೆಯಿಂದ ಆಲೇಖಾನ್ ಹೊರಟ್ಟಿ ಸಂಪರ್ಕ ಕಡಿತವಾಗಿದೆ. ಭಾರಿ ಮಳೆಯಿಂದಾಗಿ ಗುಡ್ಡ ಕುಸಿತವಾದ ಪರಿಣಾಮ ಆಲೇಖಾನ್ ಹೊರಟ್ಟಿ ಗ್ರಾಮಸ್ಥರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.