ಮೂಡಿಗೆರೆ ಚಾಲಕನ ನಿಯಂತ್ರಣ ತಪ್ಪಿ ಗ್ರಾಮಪಂಚಾಯಿತಿ ಆವರಣಕ್ಕೆ ಕಾರು ಪಲ್ಟಿ.

59

ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ತಾಲ್ಲೂಕಿನ ಸುಂಕಸಾಲೆ ಬಳಿ ನಡೆದಿದೆ. ಬೆಂಗಳೂರಿನಿಂದ ಹೊರನಾಡಿಗೆ ಹೋಗುತಿದ್ದ ಪ್ರವಾಸಿಗರ ಕಾರು ದಟ್ಟ ಮಂಜಿದ್ದ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿ 30 ಅಡಿ ಎತ್ತರದಿಂದ ಹಾರಿ ಪಂಚಾಯಿತಿ ಆವರಣಕ್ಕೆ ಬಿದ್ದಿದ್ದು ಕಾರು ಬಿದ್ದ ರಭಸಕ್ಕೆ ಕಾರು ಭಹುತೇಕ ಜಕಂಗೊಂಡಿದ್ದು ಕಾರಿನಲ್ಲಿದ್ದ ಐವರು ಪ್ರಾಣಾಪಯದಿಂದ ಪಾರಾಗಿದ್ದು ಮೂವರಿಗೇ ಗಂಭೀರ ಗಾಯವಾಗಿದ್ದು ಗಾಯಾಳುಗಳನ್ನು ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸಲಾಗಿದೆ. ಬಾಳೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.