ಮೂಡಿಗೆರೆ : ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಕೊಟ್ಟ ವಾಟ್ಸ್ ಅಪ್ ಪಾಸ್‍ಗೆ ಉಳಿದ ಜೀವ…

555
firstsuddi

ಕೊಟ್ಟಿಗೆಹಾರ : ಹೊರನಾಡಿನ ಬ್ರಹ್ಮದೇವ್ ಎಂಬುವವರು ತೀವ್ರ ಎದೆನೋವಿನಿಂದ ಬಳಲುತ್ತಿದ್ದು ಆಸ್ಪತ್ರೆಗೆಂದು ಆಂಬುಲೆನ್ಸ್‍ನಲ್ಲಿ ಹೊರಟ್ಟಿದ್ದರು. ಜಿಲ್ಲಾಧಿಕಾರಿಗಳು ನೀಡಿದ ಪಾಸ್ ಬ್ರಹ್ಮದೇವ್ ಅವರ ಜೀವ ಉಳಿಸಿದೆ.
ಎದೆನೋವಿನಿಂದ ಬಳಲುತ್ತಿದ್ದ ಹೊರನಾಡಿನ ಬ್ರಹ್ಮದೇವ್ ಎಂಬುವವರು ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಹೊರಟಿದ್ದರು. ಈ ವೇಳೆ ಕಳಸ ಚೆಕ್‍ಪೋಸ್ಟ್ ನಲ್ಲಿ ಪೊಲೀಸರು ಆಂಬುಲೆನ್ಸ್‍ನ್ನು ತಡೆದಿದ್ದಾರೆ. ಕೂಡಲೇ ಬ್ರಹ್ಮದೇವ್ ಅವರ ಪುತ್ರ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಕರೆಗೆ ಸ್ಪಂಧಿಸಿದ ಶಾಸಕರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ ಕರೆ ಮಾಡಿ ಬ್ರಹ್ಮದೇವ್ ಅವರ ಆರೋಗ್ಯ ಹದಗೆಟ್ಟಿರುವ ವಿಷಯ ತಿಳಿಸಿ ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಹೋಗಲು ವಾಟ್ಸ್ ಅಪ್ ಮೂಲಕ ಪಾಸ್ ನೀಡಿದ್ದು ಬ್ರಹ್ಮದೇವ್ ಅವರು ಶಿವಮೊಗ್ಗದ ನಂಜಪ್ಪ ಆಸ್ಪತ್ರೆ ತಲುಪಿದ್ದು, ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಶಾಸಕ ಎಂ.ಪಿ ಕುಮಾರಸ್ವಾಮಿ ಸಾರ್ವಜನಿಕರು ಇಂತಹ ಪರಿಸ್ಥಿತಿಯ ಸಂದರ್ಭದಲ್ಲಿ ತುರ್ತು ಸೇವೆ ಸಿಗದೇ ತೊಂದರೆ ಪಡುವ ಸಾಧ್ಯತೆ ಇರುವುದರಿಂದ ಸ್ಥಳಿಯವಾಗಿಯೆ ತುರ್ತು ಪಾಸ್‍ಗಳನ್ನು ನೀಡಲು ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.