ಮೂಡಿಗೆರೆ : ತರುವೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ, ರೈತರ ಆತಂಕ…

283
firstsuddi

ಮೂಡಿಗೆರೆ : ಮಲೆನಾಡು ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ತಾಲ್ಲೂಕಿನ ತರುವೆ ಗ್ರಾಮದಲ್ಲಿ ಕಾಡಾನೆ ಬೀಡು ಬಿಟ್ಟಿದ್ದು, ಕಾಫಿ ತೋಟವನ್ನು ನಾಶ ಮಾಡಿದ್ದು, ತರುವೆ ಗ್ರಾಮದ ದೇವರಾಜು ಗೌಡ ಹಾಗೂ ಪ್ರವೀಣ್, ಮುದ್ದುಗೌಡ ಎಂಬುವವರಿಗೆ ಸೇರಿದ ಕಾಫಿ, ಬಾಳೆ, ಅಡಿಕೆ ಗಿಡಗಳನ್ನು ಸಂಪೂರ್ಣ ನಾಶ ಮಾಡಿದ್ದು, ರೈತರು ಆತಂಕಗೊಳಗಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆನೆಯನ್ನು ಕಾಡಿಗಟ್ಟಿದರೆ ಮತ್ತೆ ಮತ್ತೆ ಗ್ರಾಮದ ಕಡೆಗೆ ಬಂದು ಬೆಳೆ ನಾಶ ಮಾಡುತ್ತಿದ್ದು, ಅರಣ್ಯ ಇಲಾಖೆ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.