ಮೂಡಿಗೆರೆ : ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಚಿಮ್ಮಿದ ಯುವತಿ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಇತ್ತೀಚೆಗೆ ಪಟ್ಟಣದ ಕಾರು ನಿಲ್ದಾಣದ ಬಳಿ ನಡೆದಿದೆ. 21 ವರ್ಷದ ಅನುಷಾ ಅಪಾಯದಿಂದ ಪಾರಾದ ಯುವತಿ ಎನ್ನಲಾಗಿದ್ದು, ಸ್ಕೂಟಿಯಲ್ಲಿ ಕಾರ್ ಸ್ಟಾಂಡ್ ಮುಂಭಾಗ ಹೋಗುತ್ತಿದ್ದಾಗ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅನುಷಾ ರಸ್ತೆಗೆ ಬಿದ್ದಿದ್ದಾರೆ. ಘಟನೆಯಿಂದ ಯುವತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಭಯಾನಕ ದೃಶ್ಯ ಸಮೀಪದಲ್ಲೇ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಸ್ತೆಗೆ ಬಿದ್ದ ಅನುಷಾ ಅವರನ್ನು ಸ್ಥಳೀಯರು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.









