ಮೂಡಿಗೆರೆ : ಪೈಪ್ ಲೈನ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಬಿದ್ದ ಕೆ.ಎಸ್.ಆರ್.ಟಿ.ಸಿ ಬಸ್…

1553
firstsuddi

ಮೂಡಿಗೆರೆ : ಕೆ.ಎಸ್.ಆರ್.ಟಿ.ಸಿ ಬಸ್ ರಸ್ತೆ ಬದಿ ಪೈಪ್ ಲೈನ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಬಿದ್ದಿರುವ ಘಟನೆ ತಾಲ್ಲೂಕಿನ ಮಗ್ಗಲಮಕ್ಕಿ ಕ್ರಾಸ್ ಬಳಿ ನಡೆದಿದೆ. ಮೂಡಿಗೆರೆಯಿಂದ ಹೆಸಗೋಡಿಗೆ ಹೋಗುತ್ತಿದ್ದ ಬಸ್ ಎದುರುಗಡೆಯಿಂದ ಬಂದ ಲಾರಿ ತಪ್ಪಿಸಲು ಹೋಗಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸುಮಾರು 40 ಪ್ರಯಾಣಿಕರಿದ್ದು, ಚಿಕ್ಕ ಪುಟ್ಟ ಗಾಯಗಳಾಗಿದ್ದು, ಮುಂಭಾಗದಲ್ಲಿ ಪವರ್ ಲೈನ್ ವಿದ್ಯುತ್ ಕಂಬವಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.