ಮೂಡಿಗೆರೆ : ಫಲ್ಗುಣಿಯಲ್ಲಿ ಘನತ್ಯಾಜ್ಯ ಘಟಕಕ್ಕೆ ಗುದ್ದಲಿ ಪೂಜೆ…

113
firstsuddi

ಕೊಟ್ಟಿಗೆಹಾರ : ಫಲ್ಗುಣಿ ಗ್ರಾಮ ಪಂಚಾಯಿತಿಯಿಂದ ಘನತ್ಯಾಜ್ಯ ಘಟಕ ನಿರ್ಮಿಸಲು ಫಲ್ಗುಣಿಯಲ್ಲಿ ಗುದ್ದಲಿ ಪೂಜೆ(ಭೂಮಿ ಪೂಜೆ) ನಡೆಯಿತು.

ಗುದ್ದಲಿ ಪೂಜೆ ನೆರವೇರಿಸಿ ಫಲ್ಗುಣಿ ಗ್ರಾಮ ಪಂಚಾಯಿತಿ ಪಿಡಿಒ ಯತೀಶ್ ಕುಮಾರ್ ಮಾತನಾಡಿ, ಗ್ರಾಮದ ಪರಿಸರದ ನೈರ್ಮಲ್ಯ ಕಾಪಾಡುವ ಹಿನ್ನಲೆಯಲ್ಲಿ ಘನತ್ಯಾಜ್ಯ ಘಟಕ ಸ್ಥಾಪಿಸಲಾಗುತ್ತಿದೆ. ಗ್ರಾಮಸ್ಥರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಕದೇ ಘನತ್ಯಾಜ್ಯ ವಿಲೇವಾರಿ ವಾಹನಕ್ಕೆ ಹಾಕಿ ಗ್ರಾಮದ ನೈರ್ಮಲ್ಯತೆಯನ್ನು ಕಾಪಾಡಲು ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎ.ಕವೀಶ್, ಉಪಾಧ್ಯಕ್ಷೆ ನೇತ್ರಾಹರೀಶ್, ಸದಸ್ಯರಾದ ಸರಿತಾ, ಸತೀಶ್, ಕೋಮಲ, ಶೀಲಾ, ಶಶಿಕಲಾ, ಮನುಕುಮಾರ್, ಜಾಬೀರ್‍ಹುಸೈನ್, ಹಾಗೂ ಪಂಚಾಯಿತಿ ಸಿಬ್ಬಂದಿ ಇದ್ದರು.