ಮೂಡಿಗೆರೆ : ಭಾರಿ ಮಳೆಯಿಂದ ಹಾನಿಯಾದ ಅಣ್ಣು ಪೂಜಾರಿ ಅವರ ಮನೆಗೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಸಚಿನ್ ಭೇಟಿ…

686
firstsuddi

ಮೂಡಿಗೆರೆ : ಭಾರಿ ಮಳೆಯಿಂದ ತಾಲ್ಲೂಕಿನ ಬಣಕಲ್ ಹೋಬಳಿಯಲ್ಲಿ ಹಾನಿಯಾದ ಅಣ್ಣು ಪೂಜಾರಿ ಅವರ ಮನೆಗೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಸಚಿನ್ ಅವರ ತಂಡ ಭೇಟಿ ನೀಡಿತು.
ಕಳೆದ 2 ದಿನಗಳಿಂದ ಸುರಿದ ಭಾರಿ ಗಾಳಿ ಮಳೆಗೆ ಬಣಕಲ್ ಹೊರಟ್ಟಿ  ಗ್ರಾಮದ ಅಣ್ಣು ಪೂಜಾರಿ ಅವರ ಮನೆ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಹೋಗಿದ್ದು, ಪರಿಶೀಲನೆ ನಡೆಸಿದ ಲೋಕಾಯುಕ್ತ ತಂಡ ಶೀಘ್ರವಾಗಿ ಕ್ರಮಕೈಗೊಳ್ಳುವಂತೆ ತಹಾಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದು, ಈ ಸಂದರ್ಭದಲ್ಲಿ ರೆವೆನ್ಯು ಇನ್ಸ್ ಪೆಕ್ಟರ್ ಮಂಜುನಾಥ್ ಸೇರಿದಂತೆ ಇತರ ಸಿಬ್ಬಂಧಿಗಳು ಹಾಜರಿದ್ದರು.