ಮೂಡಿಗೆರೆ : ಇಂದೂ ಕೂಡ ಮಳೆಯ ಅಬ್ಬರ ಮುಂದುವರೆದಿದ್ದು, ಗೌಡಹಳ್ಳಿ, ದಾರದಹಳ್ಳಿ, ಗುತ್ತಿ, ಹೆಸಗೋಡು, ಬಣಕಲ್ ಕೊಟ್ಟಿಗೆಹಾರ ಬಾರಿ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಗಾಳಿಮಳೆಯಿಂದಾಗಿ ಚಾರ್ಮಾಡಿ ಘಾಟ್‍ನ ಅಲ್ಲಲ್ಲಿ ಸಣ್ಣಪುಟ್ಟ ಮರ ಹಾಗೂ ಗುಡ್ಡ ಕುಸಿದಿದ್ದು ಸ್ಥಳದಲ್ಲಿ ಬೀಡು ಬಿಟ್ಟ ಜೇಸಿಬಿಯ ಮೂಲಕ ರಸ್ತೆಗೆ ಬಿದ್ದ ಮರ ಹಾಗೂ ಮಣ್ಣನ್ನು ತೆರವುಗೊಳಿಸಲಾಯಿತು.
ಕೊಟ್ಟಿಗೆಹಾರದಲ್ಲಿ ಭಾನುವಾರ ಬೆಳಿಗ್ಗೆಯಿಂದ ಇಂದು ಬೆಳಿಗ್ಗೆಯವರೆಗೆ 21.5 ಸೆಂ.ಮಿ (215 ಮಿ.ಮಿ) ಮಳೆಯಾಗಿದ್ದು ಹಲವೆಡೆ ಮರಗಳು ಧರೆಗುರುಳಿದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಸುಂಕಸಾಲೆ ಸಮೀಪದ ಕೊಡಿಗೆಹಡ್ಲು ಎಸ್ಟೇಟ್‍ನ ಲೈನ್‍ಮನೆಯ ಮೇಲೆ ಗಾಳಿ ಮಳೆಯಿಂದಾಗಿ ಅಡಿಕೆ ಮರವೊಂದು ಬಿದ್ದು ಮನೆಯ ಹೆಂಚುಗಳು ಜಖಂಗೊಂಡಿದೆ.










