ಮೂಡಿಗೆರೆ : ಮಳೆಯ ಅಬ್ಬರಕ್ಕೆ ಕುಸಿದು ಬಿದ್ದ ಮನೆ…

116
firstsuddi

ಮೂಡಿಗೆರೆ : ಕೊಟ್ಟಿಗೆಹಾರ, ಬಾಳೂರು, ಚಾರ್ಮಾಡಿ ಘಾಟ್ ಸುತ್ತಮುತ್ತ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಬುಧವಾರದಿಂದ ಶುಕ್ರವಾರ ದವರೆಗೆ 395.8ಮಿ.ಮೀ(39.58ಸೆ.ಮೀ) ಮಳೆಯಾಗಿದೆ.

ಬಾಳೂರು, ಬಣಕಲ್, ದೇವನಗೂಲ್, ಜಾರ್ಗಲ್, ಚಕಮಕಿ ಬಳಿ ವಿದ್ಯುತ್ ಕಂಬಗಳು ನೆಲಕುರುಳಿವೆ. ನಾಲ್ಕು ದಿನಗಳಿಂದ ವಿದ್ಯುತ್ ಕೈ ಕೊಟ್ಟಿದ್ದು, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪಾಡು ಹೇಳ ತೀರದಾಗಿದೆ. ಪ್ರೌಢಶಾಲೆ ಗಳಲ್ಲಿ ಆನ್ ಲೈನ್ ಪಾಠಗಳು ಆರಂಭವಾಗಿದ್ದು ನೆಟ್ ವರ್ಕ್ ಸಮಸ್ಯೆ ಯಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕಿ ಗ್ರಾಮದ ಸುಬ್ಬಯ್ಯ ಅವರ ಮನೆ ಕುಸಿದಿದೆ. ಅತಿಯಾದ ಮಳೆಯಿಂದ ಹೇಮಾವತಿ ನದಿ ತುಂಬಿ ಹರಿಯುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ನಿಡುವಾಳೆ ಗ್ರಾ.ಪಂ ವ್ಯಾಪ್ತಿಯ ಬಿಲ್ಲಾಟದ ಸುರೇಶ್ ಎಂಬುವವರ ಕೊಟ್ಟಿಗೆ ಮಳೆಯಿಂದಾಗಿ ಜರಿದು ಬಿದ್ದಿದೆ.