ಮೂಡಿಗೆರೆ : ಲಾಕ್‍ಡೌನ್ ನಿಯಮ ಉಲ್ಲಂಘನೆ-ಸಾಮಾಜಿಕ ಅಂತರ ಕಾಪಾಡದೇ ಪಡಿತರ ವಿತರಣೆ…

271
firstsuddi

ಕೊಟ್ಟಿಗೆಹಾರ : ಬಾಳೂರು ನ್ಯಾಯಬೆಲೆ ಅಂಗಡಿಯಲ್ಲಿ ಸಾಮಾಜಿಕ ಅಂತರ ಕಾಪಾಡದೇ ಪಡಿತರ ವಿತರಣೆ ಮಾಡಲಾಗುತ್ತಿದ್ದು ಅಪಾಯವನ್ನು ಆಹ್ವಾನಿಸುವಂತಿದೆ.
ಬಾಳೂರು ನ್ಯಾಯಬೆಲೆ ಅಂಗಡಿಯೂ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಬಾಸನಕೂಡಿಗೆಯ ಬಸ್ ತಂಗುದಾಣದಲ್ಲಿ ಪಡಿತರದಾರರಿಂದ ಬೆರಳಚ್ಚು ಪಡೆದುಕೊಳ್ಳಲಾಗುತ್ತಿದ್ದು ಬಸ್ ತಂಗುದಾಣ ಕಿರಿದಾಗಿರುವುದರಿಂದ ಪಡಿತರದಾರರು ಅಂತರ ಕಾಪಾಡಿಕೊಳ್ಳಲು ಸಾದ್ಯವಿಲ್ಲದಂತಾಗಿದೆ. ಬಸ್ ತಂಗುದಾಣದ ಹೊರಗಡೆ ನಿಂತ ಪಡಿತರದಾರರು ಸಾಮಾಜಿಕ ಅಂತರ ಗಾಳಿಗೆ ತೂರಿ ಪಡಿತರ ಪಡೆದುಕೊಳ್ಳುತ್ತಿದ್ದಾರೆ.
ಕೃಷಿಕರು, ಕಾಫಿ ತೋಟದ ಕಾರ್ಮಿಕರೆ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಭಾಗದಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು ಅಧಿಕಾರಿಗಳು ಸಾಮಾಜಿಕ ಅಂತರ ಕಾಪಾಡಲು ಕ್ರಮ ಕೈಗೊಳ್ಳಬೇಕಿದೆ.