ಮೂಡಿಗೆರೆ : ಶ್ರೀ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಅವದೂತ ವಿನಯ್ ಗುರೂಜಿ ಭೇಟಿ…

267
firstsuddi

ಮೂಡಿಗೆರೆ : ಪುರಾಣ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ವಿಜಯದಶಮಿಯಂದು ಕೊಪ್ಪ ತಾಲ್ಲೂಕಿನ ಗೌರಿಗದ್ದೆ ಸ್ವರ್ಣಪೀಠಿಕಾಪುರ ದತ್ತಾಶ್ರಮದ ದತ್ತಾವದೂತರಾದ ಶ್ರೀ ವಿನಯ್ ಗುರುಗಳು ಆಗಮಿಸಿ ಶ್ರೀಮಾತೆಯ ದರ್ಶನ ಪಡೆದರು.
ಶ್ರೀ ಕ್ಷೇತ್ರದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಅವರ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ ಅವರು ಅಮ್ಮನವರನ್ನು ಕಾಣಲು ಅವಕಾಶ ಒದಗಿ ಬಂದಿದ್ದು, ಅಮ್ಮನವರ ದೇವಸ್ಥಾನಕ್ಕೆ ಬಂದಿರುವುದಾಗಿ ತಿಳಿಸಿದರು.
ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಮತ್ತು ಅವರ ಧರ್ಮಪತ್ನೀ ರಾಜಲಕ್ಷ್ಮೀಭೀಜೋಷಿ ದತ್ತಾವದೂತರನ್ನು ಪೂರ್ಣ ಕುಂಭ ಸ್ವಾಗತ ಮಾಡಿ ಬರಮಾಡಿಕೊಂಡರು.
ಈ ಸಂಧರ್ಭದಲ್ಲಿ ಅಂಕರಕಣಗಣಪತಿ ದೇವಾಯದ ಧರ್ಮಕರ್ತರಾದ ಜಿ.ರಾಮನಾರಾಯಣಜೋಷಿ, ಗಿರಿಜಾಶಂಕರ್ ಜೋಷಿ ಕುಟುಂಬದವರು, ದೇವಸ್ಥಾನದ ವ್ಯವಸ್ಥಾಪಕ ಶೇಷಾದ್ರಿ ಉಪಸ್ಥಿತರಿದ್ದರು.