ಮೂಡಿಗೆರೆ : ಮಹಾಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ನಾಲ್ಕು ಮಂದಿ ರೋಗಿಗಳನ್ನು ಭಾರತೀಯ ಯೋಧರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ರಕ್ಷಣೆ ಮಾಡಿರುವ ಘಟನೆ ತಾಲ್ಲೂಕಿನ ದುರ್ಗದಹಳ್ಳಿ ಹಲ್ಗಟ್ಕ ಗ್ರಾಮದಲ್ಲಿ ನಡೆದಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಕಾಫಿ ತೋಟ ಸಂಪೂರ್ಣ ನಾಶವಾಗಿದ್ದು, ಭಾರತೀಯ ಯೋಧರು ದುರ್ಗಮ ಹಾದಿಯಲ್ಲಿ ನಡೆದು ಗ್ರಾಮಕ್ಕೆ ತಲುಪಿ ಕಳೆದ ಆರು ದಿನದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೊಟ್ಟು ಪೂಜಾರಿ, ಕೃಷ್ಣಪ್ಪ, ನಾಗರತ್ನ ಹಾಗೂ ನಾರಾಯಣ್ ಎಂಬುವವರನ್ನು 8 ಕಿ.ಮೀ ದೂರ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬಂದು ರಕ್ಷಣೆ ಮಾಡಿದ್ದಾರೆ.










