ಮೂಡಿಗೆರೆ : ಸಂಘಸಂಸ್ಥೆಗಳಿಂದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ದಾಂಜಲಿ…

220
firstsuddi

ಕೊಟ್ಟಿಗೆಹಾರ : ಎಸ್.ಪಿ ಬಾಲಸುಬ್ರಮಣ್ಯಂ ಅವರು ನಿಧನ ಕಲಾಕ್ಷೇತ್ರಕ್ಕೆ ತುಂಬಲಾಗದ ನಷ್ಟ. ಅವರ ಹಾಡುಗಳ ಮೂಲಕ ಸಂಗೀತ ಕ್ಷೇತ್ರದಲ್ಲಿ ಸದಾ ಅಮರರಾಗಿದ್ದಾರೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು, ಪತ್ರಕರ್ತರ ಸಂಘ, ಕೊಟ್ಟಿಗೆಹಾರ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಕೊಟ್ಟಿಗೆಹಾರದಲ್ಲಿ ನಡೆದ ಎಸ್‍ಪಿಬಿ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್‍ಪಿಬಿ ಅವರು ವಿವಿಧ ಭಾಷೆಗಳಲ್ಲಿ ಹಾಡುವ ಮೂಲಕ ಎಲ್ಲಾ ಭಾóಷೆಗಳನ್ನು ತಮ್ಮ ಸಂಗೀತದಿಂದ ಒಂದೆಡೆ ಶೃತಿಗೊಳಿಸಿದ್ದಾರೆ. ಕನ್ನಡ ಭಾóಷೆಯ ಮೇಲೆ ಅಪಾರ ಅಭಿಮಾನ ಹೊಂದಿದ್ದ ಎಸ್‍ಪಿಬಿ ಅವರ ಅಗಲಿಕ ಕನ್ನಡ ನಾಡಿಗೆ ಬರಸಿಡಿಲು ಬಡಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್‍ಪಿಬಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಸಲ್ಲಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಬಣಕಲ್ ಹೋಬಳಿ ಅಧ್ಯಕ್ಷ ವಸಂತ್ ಹಾರ್‍ಗೋಡು, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಪ್ರಭಾಕರ್ ಬಿನ್ನಡಿ, ಪತ್ರಕರ್ತರಾದ ಅನಿಲ್ ಮೊಂತೆರೊ, ತನು ಕೊಟ್ಟಿಗಹಾರ, ಸಂತೋಷ್ ಅತ್ತಿಗೆರೆ, ನಂದೀಶ್ ಬಂಕೇನಹಳ್ಳಿ, ಶಿಕ್ಷಕ ಭಕ್ತೇಶ್, ಸ್ಥಳೀಯರಾದ ಹಸೇನ, ಟಿ.ಎ ಖಾದರ್, ಪ್ರದೀಪ್ ರಾಜ್, ಪ್ರಶಾಂತ್, ಮುಂತಾದವರು ಇದ್ದರು.