ಕೊಟ್ಟಿಗೆಹಾರ: ಸಕ್ರಿಯವಾಗಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ತಳಮಟ್ಟದಿಂದ ಪಕ್ಷದ ಬಲವರ್ದನೆಗೆ ಎಲ್ಲರೂ ಶ್ರಮಿಸಬೇಕಿದೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನೋಜ್ ಬೆಟ್ಟಗೆರೆ ಹೇಳಿದರು.
ಬೆಟ್ಟಗೆರೆಯಲ್ಲಿ ಇಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕೆಪಿಸಿಸಿ ನೂತನ ಅಧ್ಯಕ್ಷರ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ವೀಡೀಯೋ ಕಾನ್ಪಿರೆನ್ಸ್ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಡಳಿತ ಪಕ್ಷದ ವೈಪಲ್ಯಗಳನ್ನು ಜನತೆಯ ಮುಂದಿಡುವ ಕಾರ್ಯವಾಗಬೇಕಿದೆ. ಖ.ಕೆ ಶಿವಕುಮಾರ್ ಅವರು ಕೆಪಿಸಿಸಿ ನೂತನ ಅಧ್ಯಕ್ಷರಾಗಿದ್ದರು ಪಕ್ಷದ ಕಾರ್ಯಕರ್ತರಿಗೆ ಹೊಸ ಉತ್ಸಾಹ ಬಂದಂತಾಗಿದೆ. ಅವರ ನಿರ್ಧಾರ ಬದ್ದರಾಗಿ ಎಲ್ಲರೂ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಬಣಕಲ್ ಹೋಬಳಿ ಅಧ್ಯಕ್ಷ ಸುಬ್ರಮಣ್ಯ ಮಾತನಾಡಿ ಪೆಟ್ರೋಲ್ ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಗಗನಕೇರುತ್ತಿದ್ದು ಜನಸಾಮಾನ್ಯರು ಬದುಕು ಸಾಗಿಸುವುದೇ ಕಷ್ಟವಾಗುತ್ತಿದೆ. ದಿನ ಬಳಕೆ ವಸ್ತುಗಳ ಬೆಲೆಯೂ ಹೆಚ್ಚಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಣ್ಮುಚ್ಚಿ ಕುಳಿತಿದೆ ಎಂದರು.
ಕಾಂಗ್ರೆಸ್ ರಾಜ್ಯ ಸಮಿತಿ ಕಾರ್ಯದರ್ಶಿ ಪುರುಷೊತ್ತಮ್ ಚಿತ್ತಾಪುರ್ ಮಾತನಾಡಿ ಕರೊನಾ ಅವಧಿಯಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಸರ್ಕಾರ ಮುಂದಾಗಬೇಕು. ಕರೊನಾ ಆತಂಕದಲ್ಲಿರುವ ಜನರಿಗೆ ಆತ್ಮಸ್ತೈರ್ಯ ತುಂಬಲು ಸ್ಥಳಿಯ ಆಡಳಿತದ ಮೂಲಕ ಸರ್ಕಾರಿ ಸವಲತ್ತುಗಳನ್ನು ಮನೆಮನೆಗೆ ತಲುಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಬೆಟ್ಟಗೆರೆ ಮತ್ತು ಬಣಕಲ್‍ನಲ್ಲಿ ವೀಡೀಯೋ ಕಾನ್ಪಿರೆನ್ಸ್ ಮೂಲಕ ಕೆಪಿಸಿಸಿ ನೂತನ ಅಧ್ಯಕ್ಷರ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು. ಪಕ್ಷದ ಪಧಾಧಿಕಾರಿಗಳು ಪ್ರತಿಜ್ಞಾ ವಿಧಿಯನ್ನು ಓದಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಯತೀಶ್ ಬಿ.ಆರ್, ಬಿ.ಎಲ್ ದಿನೇಶ್, ಲಾಯಕ್ ಅಲಿಖಾನ್, ಮಹೇಶ್‍ಗೌಡ, ಬಿ.ಎಂ ಹರೀಶ್, ಉಮರ್, ಅರವಿಂದ್, ರಮೇಶ್, ಶೇಖರೆಗೌಡ, ಸಿ.ಎಸ್ ವಿನಯ್‍ಕುಮಾರ್, ಪಯಾಸ್ ಅಲಿಖಾನ್, ಬಿ.ಕೆ ನಾಗೇಶ್‍ಗೌಡ, ರುದ್ರಯ್ಯ, ಅಹಮದ್ ಭಾವ, ಚಂದ್ರಯ್ಯ, ಚಂದ್ರಪ್ಪ, ಮಂಜಯ್ಯ, ಮಂಜುನಾಥ್, ಮಾಜಿ ತಾ.ಪಂ ಸದಸ್ಯ ಸಬ್ಲಿ ದೇವರಾಜ್, ಗ್ರಾ.ಪಂ ಸದಸ್ಯರಾದ ಇಪ್ರಾನ್, ದಿಲ್‍ದಾರ್ ಬೇಗಂ, ಮುಂತಾದವರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಸಕ್ರಿಯವಾಗಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ತಳಮಟ್ಟದಿಂದ ಪಕ್ಷದ ಬಲವರ್ದನೆಗೆ ಶ್ರಮಿಸೋಣ :...










