ಮೂಡಿಗೆರೆ : 112 ತುರ್ತು ಸೇವೆಯ ಕುರಿತು ಬಣಕಲ್ ಪೋಲಿಸರಿಂದ ಜನಜಾಗೃತಿ…

141
firstsuddi

ಕೊಟ್ಟಿಗೆಹಾರ : ಪೋಲಿಸ್ ಹಾಗೂ ಇನ್ನಿತರ ಎಲ್ಲಾ ತುರ್ತು ಸಹಾಯಕ್ಕಾಗಿ 112 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಬಣಕಲ್ ಠಾಣೆಯ ಪಿಎಸ್‍ಐ ಶ್ರೀನಾಥ್ ರೆಡ್ಡಿ ಹೇಳಿದರು.

112 ತುರ್ತು ಸೇವೆಯ ಕುರಿತು ಕರಪತ್ರ ವಿತರಿಸಿ ಜನಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಯಾವುದೇ ತುರ್ತು ಸಂದರ್ಭದಲ್ಲಿ 112 ಗೆ ಕರೆ ಮಾಡುವುದು, ಪ್ಯಾನಿಕ್ ಅಲರ್ಟ್‍ಗಾಗಿ ಸಾಮಾನ್ಯ ಪೋನಿನಲ್ಲಿ 5 ಅಥವಾ 9 ಸಂಖ್ಯೆಯನ್ನು ಲಾಂಗ್ ಪ್ರೆಸ್ ಮಾಡುವುದು, ಸ್ಮಾರ್ಟ್ ಪೋನಿನಲ್ಲಿ ಪವರ್ ಬಟನನ್ನು 3 ಅಥವಾ 5 ಬಾರಿ ವೇಗವಾಗಿ ಪದೇ ಪದೇ ಪ್ರೆಸ್ ಮಾಡುವುದು ಹಾಗೂ ಅದಿಕೃತ ಜಾಲತಾಣದಲ್ಲಿ ವಿನಂತಿ ಕಳಿಸುವುದು ಮತ್ತು ಇಮೇಲ್ ಕಳುಹಿಸುವುದು ಸೇರಿದಂತೆ ಇವುಗಳಲ್ಲಿ ಯಾವುದಾದರೂ ಒಂದು ವಿಧಾನದಿಂದ ತುರ್ತುಸೇವೆಗಳನ್ನು ಪಡೆಯಬಹುದು ಎಂದರು.

ಎಎಸ್‍ಐ ಶಶಿ ಮಾತನಾಡಿ ಯಾವುದೇ ತುರ್ತು ಸಂದರ್ಭದಲ್ಲಿ ಕರೆ ಮಾಡಿದರೆ ಡಿಜಿಟಲ್ ನಕ್ಷೆಯ ಮೂಲಕ ನಿಮ್ಮ ಸ್ಥಳವನ್ನು ಗುರುತಿಸಿ ಹತ್ತಿರದ ತುರ್ತು ಸ್ಪಂದನ ವಾಹನದ ಮೂಲಕ ಘಟನಾ ಸ್ಥಳಕ್ಕೆ ತಕ್ಷಣ ಬೇಟಿ ನೀಡುವುದು, ಮಹಿಳಾ ಮಕ್ಕಳ ಹಿರಿಯ ನಾಗರೀಕರ ಹಾಗೂ ಇನ್ನಿತರ ಎಲ್ಲಾ ರೀತಿಯ ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸಲು ಮತ್ತು ಎಲ್ಲಾ ದಿನಗಳಲ್ಲೂ ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಈ ಸೇವೆಯಿಂದ ಸಾಧ್ಯವಾಗುತ್ತದೆ ಎಂದರು.