ಹದಿಹರೆಯದವರನ್ನು ಸರ್ವೇಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಮೊಡವೆ. ಹೌದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಯುವತಿ, ಯುವಕರು ಮೊಡವೆಗಳಿಂದ ಪಾರಾಗಲು ನಾನಾ ರೀತಿಯ ಮದ್ದುಗಳ ಮೊರೆ ಹೋಗುತ್ತಾರೆ. ಅದರಲ್ಲೂ ಯುವತಿಯರಿಗಂತೂ ಮೊಡವೆ ಕಾಣಿಸಿಕೊಂಡಾಗಿನಿಂದಲೂ ಅದು ಹೋಗುವವರೆಗೂ ಮೊಡವೆ ಕಲೆ ಉಳಿಯುತ್ತದೆಯೇ ಎಂಬ ಚಿಂತೆ ಕಾಡತೊಡಗಿ ಮಾರುಕಟ್ಟೆಯಲ್ಲಿ ಸಿಗುವಂತಹ ನಾನಾ ವಿಧದ ಕ್ರೀಮ್‍ಗಳನ್ನು, ಸೋಪ್‍ಗಳನ್ನು ಬಳಸಿ ವಿಫಲರಾಗುವುದು ಉಂಟು. ಕೆಲವರು ಮೊಡವೆಗಳನ್ನು ಪದೇ ಪದೇ ಮುಟ್ಟುತ್ತಿದ್ದರೆ ಇನ್ನು ಕೆಲವರು ಉಗುರಿನಿಂದ ಚಿವುಟುತ್ತಾರೆ. ಇದರಿಂದ ಅದರ ಕೀವು ಬೇರೆಡೆ ಹರಡಿ ಇನ್ನಷ್ಟು ಹೆಚ್ಚಾಗುತ್ತದೆ.
ಪ್ರೌಢವಸ್ಥೆಯಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಮೊಡವೆಗಳು ಹಾರ್ಮೋನ್‍ಗಳ ಏರುಪೇರಿನಿಂದ ಬರುತ್ತದೆ. ಧೂಳು, ಮತ್ತು ಮಾಲಿನ್ಯದಿಂದಲೂ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಹಾಗೂ ಕೂದಲಿನ ಹೊಟ್ಟು ಉದುರುವುದರಿಂದಲೂ ಮೊಡವೆ ಬರುತ್ತವೆ. ಇನ್ನು ಕೆಲವರಿಗೆ ಆರೋಗ್ಯಕರವಲ್ಲದ ಆಹಾರ ಸೇವಿಸುವುದರಿಂದ ಮೊಡವೆಗಳು ಮೂಡುತ್ತವೆ.
ಮೊಡವೆ ಸಮಸ್ಯೆಗೆ ಮನೆಯಲ್ಲಿಯೇ ಸುಲಭವಾಗಿ ಸಿಗುವಂತಹ ವಸ್ತುಗಳನ್ನು ಬಳಸಿಕೊಂಡು ಹೇಗೆ ಸಮಸ್ಯೆಯಿಂದ ಪಾರಾಗೋದು ನೋಡೋಣ.
• ಬೇವಿನ ಎಲೆ ಹಾಗೂ ಅರಿಶಿಣ ಮಿಶ್ರಣ ಮಾಡಿ ಹಚ್ಚುವುದರಿಂದ ಮೊಡವೆಗಳನ್ನು ದೂರ ಮಾಡಬಹುದು.
• ದ್ರಾಕ್ಷಿ ಹಣ್ಣುಗಳಿಂದ ಮುಖವನ್ನು ಮಸಾಜ್ ಮಾಡಿ ನಂತರ ತೊಳೆದುಕೊಳ್ಳುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ.
• ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಬಳಿಕ ಆ ನೀರಿನಿಂದ ಮುಖ ತೊಳೆದುಕೊಳ್ಳುವುದು ಉತ್ತಮ.
• ಟೊಮೆಟೊ, ಕಡ್ಲೆಹಿಟ್ಟು, ಅಲೋವೆರಾ ಜೆಲ್ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
• ಹಾಲು, ನಿಂಬೆರಸ, ಅರಿಶಿಣ, ಜೇನು ಮಿಶ್ರಣ ಮಾಡಿ ಹಚ್ಚುವುದರಿಂದ ಮೊಡವೆಯನ್ನು ದೂರ ಮಾಡಬಹುದು.
• ಜೇನು ತುಪ್ಪ ಮತ್ತು ನಿಂಬೆ ರಸ ಮಿಶ್ರಣವನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಬೇಕು.
• ನಿಂಬೆ ರಸ ಮತ್ತು ಕಡ್ಲೆಹಿಟ್ಟು ಮಿಶ್ರಣ ಮಾಡಿ ಮೊಡವೆ ಮೇಲೆ ಹಚ್ಚಬೇಕು.
• ಬೆಳ್ಳುಳ್ಳಿಯನ್ನು ಮೊಡವೆ ಮೇಲೆ ಹಚ್ಚಬೇಕು.
• ಸಾಸಿವೆ ಮತ್ತು ಜೇನು ತುಪ್ಪ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದು ಒಳ್ಳೆಯದು.
• ಅರಿಶಿಣ ಮತ್ತು ಹಾಲು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆಯನ್ನು ಕಡಿಮೆ ಮಾಡಬಹುದು.
• ಟೊಮೆಟೊ ರಸ ಹಾಗೂ ಅರಿಶಿಣ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
• ಜೇನು ತುಪ್ಪವನ್ನು ಮೊಡವೆ ಇರುವ ಜಾಗಕ್ಕೆ ಹಚ್ಚುವುದರಿಂದ ಮೊಡವೆ ದೂರವಾಗುತ್ತದೆ.
• ಕಿತ್ತಲೆ ಹಣ್ಣಿನ ಸಿಪ್ಪೆ ಒಣಗಿಸಿ ಅದನ್ನು ಪುಡಿ ಮಾಡಿ ಅದಕ್ಕೆ ನೀರನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಕಡಿಮೆಯಾಗುತ್ತದೆ.
• ಅಡಿಗೆ ಸೋಡವನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಮೊಡವೆ ಇರುವ ಜಾಗಕ್ಕೆ ಹಚ್ಚಬೇಕು.
• ಟೂತ್ ಪೇಸ್ಟ್‍ನ್ನು ಮೊಡವೆ ಇರುವ ಜಾಗಕ್ಕೆ ಹಚ್ಚುವುದರಿಂದ ಮೊಡವೆ ಕಡಿಮೆಯಾಗುತ್ತದೆ.
• ಚಕ್ಕೆ ಪುಡಿ ಮತ್ತು ಜೇನು ತುಪ್ಪ ಮಿಶ್ರಣ ಮಾಡಿ ಹಚ್ಚುವುದರಿಂದ ಮೊಡವೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
• ಕಡ್ಲೆಹಿಟ್ಟು, ಗಂಧದ ಪುಡಿ, ಹನಿ ಹಾಲು ಮಿಶ್ರಣವನ್ನು ಮೊಡವೆಗೆ ಹಚ್ಚುವುದು ಉತ್ತಮ.
• ಗಂಧದ ಪುಡಿ, ಅರಿಶಿಣ, ಹಾಲು ಮಿಶ್ರಣ ಮಾಡಿ ಹಚ್ಚುವುದರಿಂದ ಮೊಡವೆಗಳಿಂದ ದೂರ ಉಳಿಯಬಹುದು.
• ಟೊಮೆಟೊ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಕಡಿಮೆಯಾಗುತ್ತದೆ.










