ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಅವರ ಮಾಸ್ಟರ್ ಪ್ಲಾನ್ ಬ್ಯಾಟಿಂಗ್ ಹಾಗೂ ಹರ್ಷಲ್ ಪಟೇಲ್ ಅವರ ಅದ್ಭುತ ಬೌಲಿಂಗ್ ನಿಂದಾಗಿ ಆರ್ಸಿಬಿ, ಮುಂಬೈ ಇಂಡಿಯನ್ಸ್ ತಂಡವನ್ನು ಎರಡು ವಿಕೆಟ್ ಗಳಿಂದ ಸೋಲಿಸಿತು.
ಪಂದ್ಯದ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಮೊದಲ ಪಂದ್ಯ ಗೆಲ್ಲುವುದಕ್ಕಿಂತ ಟೂರ್ನಿ ಗೆಲ್ಲುವುದೇ ನಮಗೆ ಮುಖ್ಯ. ಮೊದಲ ಪಂದ್ಯದಲ್ಲಿ ನಮ್ಮ ಆಟ ಹೋರಾಟ ಚೆನ್ನಾಗಿತ್ತು ನಮ್ಮ ಸ್ಕೋರ್ ಬಗ್ಗೆ ಖುಷಿ ಇದೆ. ನಮ್ಮ ಲೆಕ್ಕದ ಪ್ರಕಾರ ತಂಡ ಇನ್ನು 20 ರನ್ ಕಲೆ ಹಾಕಬಹುದಿತ್ತು. ನಾವು ಕೆಲ ತಪ್ಪುಗಳನ್ನ ಮಾಡಿದ್ದೇವೆ. ಆದರೆ ಅವೆಲ್ಲವನ್ನೂ ಮರೆತು ಮುಂದೆ ಹೋಗಬೇಕು. ಪಿಚ್ ಬ್ಯಾಟ್ಸ್ ಮನ್ ಗಳಿಗೆ ಪೂರಕವಾಗಿರಲಿಲ್ಲ ಅನ್ನೋದು ನನ್ನ ಅಭಿಪ್ರಾಯ. ಮುಂದಿನ ಪಂದ್ಯಗಳಲ್ಲಿ ಈ ಬಗ್ಗೆ ಯೋಚನೆ ಮಾಡುತ್ತೇವೆ. ಡಿವಿಲಿಯರ್ಸ್ ಅದ್ಭುತ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು ಎಂದು ರೋಹಿತ್ ಹೇಳಿದರು.










