ಸುಖೋಯ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ದ್ರೌಪದಿ ಮುರ್ಮು.

63
firstsuddi

ತೇಜ್‌ಪುರ್ (ಅಸ್ಸಾಂ): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಭಾರತೀಯ ವಾಯುಪಡೆಯ ಸುಖೋಯ್-30 ಎಂಕೆಐ ಯುದ್ಧ ವಿಮಾನದಲ್ಲಿ ಮೊದಲ ಬಾರಿಗೆ ಪ್ರಯಾಣಿಸಿದ್ದಾರೆ.

ಅಸ್ಸಾಂನ ತೇಜ್‌ಪುರ ವಾಯುಪಡೆ ನಿಲ್ದಾಣದಲ್ಲಿ ಮುರ್ಮು ಯುದ್ಧ ವಿಮಾನವನ್ನು ಏರಿದ್ದಾರೆ.ಮುರ್ಮು ಅವರು ಏ.6ರಂದು ಅಸ್ಸಾಂಗೆ ಭೇಟಿ ನೀಡಿದ್ದು, ಹಲವು ಯೋಜನೆಗಳನ್ನು ಉದ್ಘಾಟಿಸಿದ್ದಾರೆ. 

ದ್ರೌಪದಿ ಮುರ್ಮು ಅವರು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ 2ನೇ ರಾಷ್ಟ್ರಪತಿಯಾಗಿದ್ದಾರೆ. 2009ರಲ್ಲಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸುಖೋಯ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು.

ಸುಖೋಯ್-30 ಎಂಕೆಐ ಟ್ವಿನ್ ಸೀಟರ್ ಮಲ್ಟಿರೋಲ್ ಫೈಟರ್ ಜೆಟ್ ಆಗಿದ್ದು, ಇದನ್ನು ರಷ್ಯಾದ ಸುಖೋಯ್ ಅಭಿವೃದ್ಧಿಪಡಿಸಿದೆ. ಇದನ್ನು ಭಾರತದ ಏರೋಸ್ಪೇಸ್ ದೈತ್ಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ (ಹೆಚ್ಎಎಲ್) ಪರವಾನಗಿ ಅಡಿಯಲ್ಲಿ ನಿರ್ಮಿಸಲಾಗಿದೆ.