ಮೊಬೈಲ್ ನುಂಗಿದ ವ್ಯಕ್ತಿ – ಆಪರೇಷನ್ ಮೂಲಕ ಹೊರತೆಗೆದ ವೈದ್ಯರು…

57
firstsuddi

ವಾಷಿಂಗ್ಟನ್ : ವ್ಯಕ್ತಿಯ ಹೊಟ್ಟೆಯಲ್ಲಿದ್ದ ಮೊಬೈಲ್ ನನ್ನು ಆಪರೇಷನ್ ಮೂಲಕ ಹೊರ ತೆಗೆದಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.

33 ವರ್ಷದ ಫಿನ್ನಿಷ್ ಕಂಪನಿಯ ಮಾಜಿ ಊದ್ಯೋಗಿ ಫೋನ್ ನುಂಗಿದ್ದು, ಹೊಟ್ಟೆಯೊಳಗೆ ಮೊಬೈಲ್ ಮೂರು ತುಂಡುಗಳಾಗಿರುವುದು ಸ್ಕ್ಯಾನ್ ನಲ್ಲಿ ಕಾಣಿಸಿಕೊಂಡಿತ್ತು. ನಂತರ ವೈದ್ಯರು ಆಪರೇಷನ್ ಪ್ರಾರಂಭಿಸಿದ್ದಾರೆ. ಇದೀಗ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವ ಕಾರಣಕ್ಕಾಗಿ ಮೊಬೈಲ್ ನುಂಗಿದ್ದಾನೆ ಎಂಬುದು ತಿಳಿದು ಬಂದಿಲ್ಲ.

ಮೊಬೈಲ್ ನಾಲ್ಕು ದಿನಗಳಕಾಲ ವ್ಯಕ್ತಿಯ ಹೊಟ್ಟೆಯಲ್ಲಿ ಇತ್ತು. ಮೊಬೈಲ್ ಡೈಜೆಸ್ಟ್ ಆಗಿಲ್ಲ. ಹೀಗಾಗಿ ಆಪರೇಷನ್ ಮೂಲಕವಾಗಿ ಹೊರತಗೆ ತೆಗೆಯಬೇಕಾಯಿತ್ತು ಎಂದು ವೈದ್ಯರು ಹೇಳಿದ್ದಾರೆ.