ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-2 ಉಪಗ್ರಹ…

341
firstsuddi

ನವದೆಹಲಿ : ಜುಲೈ 22ರಂದು ಯಶಸ್ವಿಯಾಗಿ ನಭಕ್ಕೆ ಜಿಗಿದಿದ್ದ ಇಸ್ರೋದ ಚಂದ್ರಯಾನ-2 ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಚಂದ್ರಯಾನ-2 ಉಡಾವಣೆಯಾಗಿ 28ದಿನಗಳ ನಂತರ ಇಂದು ಬೆಳಿಗ್ಗೆ 9.02ಕ್ಕೆ ಉಪಗ್ರಹವನ್ನು ಚಂದ್ರನ ಕಕ್ಷೆಯತ್ತ ಯಶಸ್ವಿಯಾಗಿ ಸೇರಿಸಲಾಗಿದೆ ಎಂದು ಇಸ್ರೋ ಮೂಲಗಳಿಂದ ತಿಳಿದು ಬಂದಿದೆ. ಇಂದು ಕಕ್ಷೆಯಲ್ಲಿ ಕಾರ್ಯಾಚರಣೆ ನಡೆಸಿದ ಬಳಿಕ ಚಂದ್ರನ ಮೇಲ್ಮೈಯಿಂದ 100 ಕಿ.ಮೀ ದೂರದವರೆಗೆ ಬಾಹ್ಯಾಕಾಶ ನೌಕೆ ಪ್ರವೇಶಿಸಲು ಇನ್ನೂ ನಾಲ್ಕು ಬಾರಿ ಕಕ್ಷೆಯ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಸೆ.2ರ ವೇಳೆಗೆ ನಾಲ್ಕು ಬಾರಿ ಕಕ್ಷೆಯ ಕಾರ್ಯಾಚರಣೆಯನ್ನು ಸಾಧಿಸಿದ ಬಳಿಕ ವಿಕ್ರಮ್ ಉಡಾವಣಾ ವಾಹಕ ಪ್ರತ್ಯೇಕವಾಗಲಿದೆ. ಉಡಾವಣಾ ವಾಹಕವನ್ನು ಚಂದ್ರನಿಂದ ಮತ್ತಷ್ಟು ಹತ್ತಿರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ 2 ಬಾರಿ ಅದರ ಕಕ್ಷೆಯ ಎತ್ತರವನ್ನು ಎತ್ತರಿಸಲಾಗುವುದು. ಹಾಗೂ ಸೆ.7ರಂದು ಉಪಗ್ರಹವನ್ನು ಚಂದ್ರನ ಮೇಲ್ಮೈ ಮೇಲೆ ಇಳಿಸಲಾಗುವುದು ಎಂದು ತಿಳಿಸಿದ್ದಾರೆ.