ನವದೆಹಲಿ : ಇಂದು ರಕ್ಷಾಬಂಧನ ಹಿನ್ನೆಲೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ದೇಶದ ಪ್ರಜೆಗೆ ಶುಭಾಷಯ ಕೋರಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಟ್ವಿಟರ್‍ನಲ್ಲಿ “ ರಕ್ಷಾಬಂಧನದ ಶುಭಾಶಯಗಳು..! ರಾಖಿ ಎಂಬುವುದು ಪ್ರೀತಿ ಮತ್ತು ನಂಬಿಕೆಯ ಪವಿತ್ರ ದಾರವಾಗಿದ್ದು, ಸಹೋದರಿಯರನ್ನು ಸಹೋದರರೊಂದಿಗೆ ವಿಶೇಷ ಬಂಧನದಲ್ಲಿ ಸಂಪರ್ಕಿಸುತ್ತದೆ. ಈ ದಿನ, ಮಹಿಳೆಯರ ಗೌರವ ಮತ್ತು ಘನತೆಯನ್ನು ಭದ್ರಪಡಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು “ ಎಲ್ಲಾ ದೇಶವಾಸಿಗಳಿಗೆ ರಕ್ಷಬಂಧನದಂತಹ ಪವಿತ್ರ ಹಬ್ಬದ ಶುಭಾಷಯಗಳು ಎಂದು ಟ್ವೀಟ್ ಮಾಡಿದ್ದಾರೆ.










