ರಶ್ಮಿಕಾಗಿಂತ ‘ಪುಷ್ಪ’ ಸಿನಿಮಾಗೆ ನಾನೇ ಉತ್ತಮ – ಕೊಂಕು ತೆಗೆದ ಐಶ್ವರ್ಯಾ ರಾಜೇಶ್.

61
firstsuddi

ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಟಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಬ್ಯುಸಿ ಇರುವ ನಟಿಯರ ಪೈಕಿ ರಶ್ಮಿಕಾ ಮುಂಚೂಣಿಯಲ್ಲಿದ್ದಾರೆ. ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಶ್ರೀವಲ್ಲಿ ಪಾತ್ರಕ್ಕೆ ಜೀವತುಂಬಿದ್ದರು. ‘ಪುಷ್ಪ’ ಬಳಿಕ ಶ್ರೀವಲ್ಲಿ ಪಾತ್ರಕ್ಕೆ ಬಹುದೊಡ್ಡ ಫ್ಯಾನ್ ಬೇಸ್ ಸೃಷ್ಟಿಯಾಗಿತ್ತು. ಇದೀಗ ಶ್ರೀವಲ್ಲಿ ರೋಲ್ ಬಗ್ಗೆ ತಮಿಳಿನ ನಟಿ ಐಶ್ವರ್ಯಾ ರಾಜೇಶ್ ಕೊಂಕು ತೆಗೆದಿದ್ದಾರೆ.

ಐಶ್ವರ್ಯಾ ರಾಜೇಶ್ ನಟನೆಯ ‘ಫರ್ಹಾನಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ತಮಿಳಿನ ಈ ಸಿನಿಮಾ ಪ್ರಚಾರದಲ್ಲಿ ಐಶ್ವರ್ಯಾ ರಾಜೇಶ್ ಬ್ಯುಸಿ ಆಗಿದ್ದಾರೆ. ಅವರಿಗೆ ತೆಲುಗು ಸಿನಿಮಾ ಬಗ್ಗೆ ಕೇಳಲಾಯಿತು. ಇದಕ್ಕೆ ಉತ್ತರ ನೀಡಿದ ಐಶ್ವರ್ಯಾ ‘ನಾನು ಪುಷ್ಪ ಚಿತ್ರದ ಶ್ರೀವಲ್ಲಿ ಪಾತ್ರವನ್ನು ಮಾಡಲು ತುಂಬಾ ಇಷ್ಟಪಡುತ್ತೇನೆ. ರಶ್ಮಿಕಾ ಉತ್ತಮವಾಗಿ ನಟಿಸಿದ್ದಾರೆ. ಆದರೆ ನಾನು ಅವರಿಗಿಂತ ಉತ್ತಮವಾಗಿ ನಟಿಸುತ್ತಿದ್ದೆ’ ಎಂದು ನಾನು ಭಾವಿಸುತ್ತೇನೆ. ಉತ್ತಮ ಪ್ರಾಜೆಕ್ಟ್‌ಗಳು ಬಂದರೆ ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ’ ಎಂದು ಹೇಳಿದ್ದಾರೆ.

ಈ ಹೇಳಿಕೆ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ. ರಶ್ಮಿಕಾ ಅಭಿಮಾನಿಗಳು ಐಶ್ವರ್ಯಾ ಅವರನ್ನು ಟೀಕೆ ಮಾಡುತ್ತಿದ್ದಾರೆ. ಆ ಪಾತ್ರಕ್ಕೆ ರಶ್ಮಿಕಾ ಸೂಕ್ತ ಎಂದು ಅಭಿಮಾನಿಗಳು ಹೇಳಿದ್ದಾರೆ.

ಐಶ್ವರ್ಯಾ ರಾಜೇಶ್ ಅವರು 8 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ನಟಿ ಅಭಿನಯಿಸುತ್ತಿದ್ದಾರೆ.