ಹೈದರಾಬಾದ್ : 2017ರ ಉತ್ತಮ ತಹಶೀಲ್ದಾರ್ ಎಂದು ಮುಖ್ಯಮಂತ್ರಿ ಪ್ರಶಸ್ತಿ ಪಡೆದ ಕೇಶಂಪೇಟೆ ತಹಶೀಲ್ದಾರ್ ಲಾವಣ್ಯ ಅವರು ಜೈಲುಪಾಲಾಗಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ಕೇಶಂಪೇಟೆ ತಹಶೀಲ್ದಾರಾಗಿ ಕಾರ್ಯನಿರ್ವಹಿಸುತ್ತಿದ್ದ ಲಾವಣ್ಯ ಅವರ ಹೈದರಾಬಾದ್‍ನಲ್ಲಿ ಇರುವ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ದಾಳಿ ಮಾಡಿ 93.5 ಲಕ್ಷ ರೂ ಹಣ ಹಾಗೂ 400ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಭಾಸ್ಕರ್ ರೆಡ್ಡಿ ಎಂಬ ರೈತನ ಹೊಲದ ಭೂ ದಾಖಲೆಗಳನ್ನು ಖಾತೆ ಮಾಡಿಕೊಡಲು 8ಲಕ್ಷ ಲಂಚ ಕೊಡುವಂತೆ ಒತ್ತಾಯಿಸಿದ್ದು, ಹಲವು ತಿಂಗಳುಗಳಿಂದ ಕೆಲಸ ಮಾಡಿಕೊಡದೇ ತೊಂದರೆ ನೀಡುತ್ತಿದ್ದರು ಎನ್ನಲಾಗಿದ್ದು, ಹಾಗೂ ಕಿಸಾನ್ ಪಾಸ್‍ಪೋರ್ಟ್ ಪಡೆಯಲು 30ಸಾವಿರ ಲಂಚ ನೀಡಿದ್ದರು. ಭಾಸ್ಕರ್ ರೆಡ್ಡಿ ಅವರಿಂದ 4ಲಕ್ಷ ರೂ ಹಣ ಪಡೆಯುವಾಗ ಗ್ರಾಮ ಲೆಕ್ಕಾಧಿಕಾರಿ ಅಂತಯ್ಯ ಎಸಿಬಿ ಬಲೆಗೆ ಬಿದ್ದಿದ್ದು, ನಾನು ಪಡೆದ ಲಂಚದ ಹಣದಲ್ಲಿ 5ಲಕ್ಷ ರೂಗಳನ್ನು ತಹಶೀಲ್ದಾರ್ ಲಾವಣ್ಯ ಅವರಿಗೆ ಕೊಡಬೇಕು ಎಂದು ತನಿಖೆ ವೇಳೆ ಹೇಳಿದ್ದು, ತಹಶೀಲ್ದಾರ್ ಲಾವಣ್ಯ ಹಾಗೂ ಅಂತಯ್ಯನ ದೂರವಾಣಿ ಸಂಭಾಷಣೆ ಸಿಕ್ಕಿದ್ದು, ತಹಶೀಲ್ದಾರ್ ನ್ನು ಪ್ರಶ್ನಿಸಿದಾಗ ನನಗೇನು ಗೊತ್ತಿಲ್ಲ ಎಂದು ತಿಳಿಸಿದ್ದು, ಅದಾದ ಬಳಿಕ ಆದಾಯಕ್ಕೆ ಮೀರಿದ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿಕೊಂಡ ಎಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.










