ರಾಜ್ಯ ಸರ್ಕಾರ ಇದ್ದೂ ಸತ್ತಂತಾಗಿದೆ : ಬಿ.ಎಸ್. ಯಡಿಯೂರಪ್ಪ…

192
firstsuddi

ಹುಬ್ಬಳ್ಳಿ : ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಯಾವುದು ಸರಿಯಿಲ್ಲ. ರಾಜ್ಯ ಸರ್ಕಾರ ಇದ್ದೂ ಸತ್ತಂತಾಗಿದೆ. ಮೈತ್ರಿ ಸರ್ಕಾರದ ಬಗ್ಗೆ 20ಶಾಸಕರಿಗೆ ಅತೃಪ್ತಿ ಇದೆ. ಅವರು ಯಾವ ಸಂದರ್ಭದಲ್ಲಿ ಬೇಕಾದರೂ ನಿರ್ಧಾರ ತೆಗೆದುಕೊಳ್ಳಬಹುದು. ಈಗಾಗಲೇ ನಾವು 104 ಶಾಸಕರ ಬೆಂಬಲವನ್ನು ಹೊಂದಿದ್ದೇವೆ. ಚಿಂಚೋಳಿ ಹಾಗೂ ಕುಂದಗೋಳ ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆ ಪ್ರಮುಖವಾದದ್ದು. ಉಪ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಯೇ ಗೆಲುವನ್ನು ಸಾಧಿಸುತ್ತಾರೆ. ಈ ಎರಡು ಕ್ಷೇತ್ರಗಳ ಗೆಲುವಿನಿಂದ 106 ಶಾಸಕರು ಆಗುತ್ತಾರೆ. ಈಗಾಗಲೇ ಪಕ್ಷೇತರ ಶಾಸಕರು ನಮ್ಮನ್ನು ಬೆಂಬಲಿಸಿದ್ದಾರೆ. ಇದರಿಂದ ವಿಧಾನಸಭೆಯಲ್ಲಿ ನಮ್ಮ ಒಟ್ಟು ಬಲ 109ಆಗುತ್ತದೆ. ಹೀಗಾಗಿ ಸರ್ಕಾರ ರಚನೆಯಾಗಲು ಸಹಕಾರಿಯಾಗುತ್ತದೆ.