ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನದಂದೇ ಧ್ರುವ ಸರ್ಜಾ-ಪ್ರೇರಣಾ ಮಕ್ಕಳಿಗೆ ನಾಮಕರಣ ಶಾಸ್ತ್ರ…

56
firstsuddi

ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿದೆ. ಈ ವಿಶೇಷ ದಿನದಂದೇ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ಮಕ್ಕಳಿಗೆ ನಾಮಕರಣ ಶಾಸ್ತ್ರ ಕೂಡ ಜರುಗಿದೆ.

ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ. ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ನಾಮಕರಣ ಶಾಸ್ತ್ರ ನಡೆದಿದೆ. ಧ್ರುವ ಸರ್ಜಾ ಅವರು ಆಂಜನೇಯನ ಭಕ್ತರು. ಹನುಮಂತನ ಕಂಡರೆ ಧ್ರುವ ಸರ್ಜಾ ಅವರಿಗೆ ಅಪಾರ ಭಕ್ತಿ. ಹೀಗಾಗಿ, ರಾಮ ಮಂದಿರದಲ್ಲಿನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ದಿನವೇ ನಾಮಕರಣ ಶಾಸ್ತ್ರ ನಡೆದಿದೆ.

2019ರ ನವೆಂಬರ್​ನಲ್ಲಿ ಧ್ರುವ ಸರ್ಜಾ ಹಾಗೂ ಪ್ರೇರಣಾ ಮದುವೆ ಆದರು. ಪ್ರೇರಣಾ ಹಾಗೂ ಧ್ರುವ ಸರ್ಜಾ ದಂಪತಿಗೆ ಇಬ್ಬರು ಮಕ್ಕಳು. 2022ರ ಅಕ್ಟೋಬರ್​ನಲ್ಲಿ ಮಗಳು ಜನಿಸಿದಳು. ನಂತರ 2023ರ ಸೆಪ್ಟೆಂಬರ್​ನಲ್ಲಿ ಗಂಡು ಮಗು ಜನಿಸಿತು. ಈಗ ಮಗಳಿಗೆ ರುದ್ರಾಕ್ಷಿ ಹಾಗೂ ಮಗನಿಗೆ ಹಯಗ್ರಿವ ಎಂದು ನಾಮಕರಣ ಮಾಡಲಾಗಿದೆ. ಕುಟುಂಬದವರು, ಆಪ್ತರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.