ರಾಷ್ಟ್ರ ರಾಜಧಾನಿಯಲ್ಲಿ ಭಾರಿ ದಾಳಿಗೆ ಸಂಚು ರೂಪಿಸಿದ್ದ ಐವರು ಉಗ್ರರ ಬಂಧನ…

122
firstsuddi

ನವದೆಹಲಿ : ಭಾರಿ ಸ್ಪೋಟಕ್ಕೆ ಸಂಚು ರೂಪಿಸಿದ್ದ ಐವರು ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಈ ಮೂಲಕ ನಡೆಯಬೇಕಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ದಾಳಿಗೆ ಸಂಚು ರೂಪಿಸಿದ್ದ ಮೂವರು ಜಮ್ಮು ಕಾಶ್ಮೀರಾ ಹಾಗೂ ಇಬ್ಬರು ಪಂಜಾಬ್ ಮೂಲದ ಉಗ್ರರನ್ನು ದೆಹಲಿಯ ಪೊಲೀಸರು ಖಚಿತ ಮಾಹಿತಿಯನ್ನು ಆಧರಿಸಿ ಬಂಧಿಸಲು ತೆರಳಿದ ಪೊಲೀಸರು ಹಾಗೂ ಉಗ್ರ ನಡುವೆ ಗುಂಡಿನ ದಾಳಿ ನಡೆದಿದ್ದು, ಬಳಿಕ ಪೊಲೀಸರು ಐವರು ಉಗ್ರರನ್ನು ಬಂಧಿಸಿ ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೆಹಲಿ ಪೊಲೀಸರು ಉಗ್ರರನ್ನು ಬಂಧಿಸುವ ಮೂಲಕ ಭಾರೀ ದಾಳಿಯ ಸಂಚನ್ನು ವಿಫಲಗೊಳಿಸಿದ್ದಾರೆ.