ರಾಷ್ಟ್ರ ರಾಜಧಾನಿ ಲಾಕ್ ಡೌನ್ ; ಊರುಗಳತ್ತ ಪ್ರಯಾಣ ಬೆಳೆಸಿದ ವಲಸೆ ಕಾರ್ಮಿಕರು..!

88
firstsuddi

ನವದೆಹಲಿ : ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ರಾಷ್ಟ್ರ ರಾಜಧಾನಿ ಒಂದು ವಾರ ಸಂಪೂರ್ಣವಾಗಿ ಲಾಕ್ ಡೌನ್ ಆಗಿದೆ. ಈ ಹಿನ್ನೆಲೆ ಭಯಗೊಂಡ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳತ್ತ ಮುಖಮಾಡಿದ್ದಾರೆ. ನಿನ್ನೆ ರಾತ್ರಿ 10 ಗಂಟೆಗೆ ಆರಂಭವಾದ ಲಾಕ್ ಡೌನ್ ಏಪ್ರಿಲ್ 26ರ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಇರಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. 6 ದಿನಗಳ ಲಾಕ್ ಡೌನ್ ಜಾರಿಗೆ ಆದೇಶ ಬರುತ್ತಿದ್ದಂತೆ ಭಯಗೊಂಡು ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ.

ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೇವಲ 6 ದಿನಗಳವರೆಗೆ ಮಾತ್ರ ಈ ಲಾಕ್ ಡೌನ್ ಇರಲಿದೆ. ಹೀಗಾಗಿ ಯಾರು ಕೂಡ ದೆಹಲಿ ಬಿಟ್ಟು ಹೊರಗೆ ಹೋಗಬೇಡಿ ಎಂದು ಮನವಿ ಮಾಡಿದ್ದರು. ಆದರೆ ವಲಸೆ ಕಾರ್ಮಿಕರು ಮಾತ್ರ ಮಧ್ಯರಾತ್ರಿಯಲ್ಲಿ ಲಾರಿ, ಆಟೋ, ಟೆಂಪೋ, ಹತ್ತಿ ತಮ್ಮ ಊರುಗಳತ್ತ ಪ್ರಯಾಣ ಮಾಡುತ್ತಿದ್ದಾರೆ.