ರೇಡಿಯಾಲಜಿಸ್ಟ್ ದಂಪತಿಗಳ ಮೇಲೆ ದುಷ್ಕರ್ಮಿಗಳ ಹಲ್ಲೆ; ಚಿನ್ನಾಭರಣ, ಮೊಬೈಲ್ ದೋಚಿ ಪರಾರಿ!

194
First suddi

ಮೈಸೂರು: ಮನೆಗೆ ನುಗ್ಗಿದ ದುಷ್ಕರ್ಮಿಗಳು ರೇಡಿಯಾಲಜಿಸ್ಟ್ ದಂಪತಿ ಡಾ. ಕೇಶವ್ ಪಿ ಮತ್ತು ಅವರ ಪತ್ನಿ ಡಾ.ಕೃಷ್ಣಕುಮಾರಿ ಇಬ್ಬರಿಗೂ ಮನಬಂದಂತೆ ಇರಿದು ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿರುವ ಘಟನೆ ಮೈಸೂರಿನ ವಿಜಯನಗರದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಹಲ್ಲೆ ನಡೆಸಿದ ದುಷ್ಕರ್ಮಿಗಳು 120 ಗ್ರಾಂ ತೂಕ ಚಿನ್ನದ ಆಭರಣಗಳು ಮತ್ತು ಐಫೋನ್ ಅನ್ನು ಸಹ ದೋಚಿದ್ದಾರೆ. ದಾಳಿಯ ನಂತರ ದಂಪತಿಗಳು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪೈಕಿ ಪತಿ ಕೇಶವ್ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.