ಲಂಚ ಪಡೆದ ಆರೋಪ : ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಅರೆಸ್ಟ್…

96
firstsuddi

ಬೆಂಗಳೂರು : ಲಂಚ ಪಡೆದ ಆರೋಪದಡಿ ಐಎಎಸ್ ಅಧಿಕಾರಿ ಜೆ.ಮಂಜುನಾಥ್ ರನ್ನ ಎಸಿಬಿ ಅಧಿಕಾರಿಗಳು ಯಶವಂತಪುರದಲ್ಲಿರುವ ಅವರ ನಿವಾಸದಲ್ಲಿ ಬಂಧಿಸಿದ್ದಾರೆ.

ಭೂವ್ಯಾಜ್ಯ ಸಂಬಂಧ ಲಂಚ ಪಡೆದ ಆರೋಪ ಕೇಳಿಬಂದ ಹಿನ್ನಲೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅವರನ್ನು ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಮ್ ಎಂಡಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಎಸಿಬಿ ಡಿವೈಎಸ್‍ಪಿ ರವಿಶಂಕರ್ ನೇತೃತ್ವದಲ್ಲಿ ಮಂಜುನಾಥ್ ಬಂಧನವಾಗಿದೆ.